6 ತಿಂಗಳಲ್ಲಿ ಅಮೆರಿಕ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಕುಸಿತ

| N/A | Published : Aug 24 2025, 02:01 AM IST

6 ತಿಂಗಳಲ್ಲಿ ಅಮೆರಿಕ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕಕ್ಕೆ ಹೋಗಲಿಚ್ಛಿಸುವ ಅಥವಾ ಅದಾಗಲೇ ನೆಲೆಸಿರುವ ವಸಲಿಗರ ಪಾಲಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ವಲಸೆ ನೀತಿಗಳು ದುಃಸ್ವಪ್ನವಾಗಿ ಪರಿಣಮಿಸಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಈ ವರ್ಷದ ಜನವರಿಯಿಂದ ಜೂನ್‌ ನಡುವೆ ಅಮೆರಿಕದಲ್ಲಿರುವ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಇಳಿಕೆಯಾಗಿದೆ 

 ವಾಷಿಂಗ್ಟನ್‌: ಅಮೆರಿಕಕ್ಕೆ ಹೋಗಲಿಚ್ಛಿಸುವ ಅಥವಾ ಅದಾಗಲೇ ನೆಲೆಸಿರುವ ವಸಲಿಗರ ಪಾಲಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ವಲಸೆ ನೀತಿಗಳು ದುಃಸ್ವಪ್ನವಾಗಿ ಪರಿಣಮಿಸಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಈ ವರ್ಷದ ಜನವರಿಯಿಂದ ಜೂನ್‌ ನಡುವೆ ಅಮೆರಿಕದಲ್ಲಿರುವ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಇಳಿಕೆಯಾಗಿದೆ. ಹೀಗಾಗಿರುವುದು 1960ರ ಬಳಿಕ ಇದೇ ಮೊದಲು.

ಪ್ಯೂ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, 6 ತಿಂಗಳಲ್ಲಿ 15 ಲಕ್ಷ ಇಳಿಕೆಯಿಂದಾಗಿ, ಕಳೆದ ವರ್ಷ 5.3 ಕೋಟಿ ಇದ್ದ ವಲಸಿಗರ ಸಂಖ್ಯೆ 5.1 ಕೋಟಿಗೆ ಕ್ಷೀಣಿಸಿದೆ. ಇದರ ಪರಿಣಾಮ ದುಡಿಯುವ ವರ್ಗದ ಮೇಲೂ ಆಗಿದ್ದು, 750000 ಕಾರ್ಮಿಕರು ಕಡಿಮೆಯಾಗಿದ್ದಾರೆ. ದುಡಿಯುವ ವರ್ಗದಲ್ಲಿ ಅಮೆರಿಕನ್ನರು ಅತಿ ಕಡಿಮೆಯಿದ್ದು, ಆ ದೇಶ ವಲಸಿಗ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ ಎಂಬುದು ಗಮನಾರ್ಹ.

ಅಚ್ಚರಿಯೆಂದರೆ, ಅಕ್ರಮ ವಲಸಿಗರ ಸಂಖ್ಯೆಯಲ್ಲಿಯೂ ಇಳಿಕೆಯಾಗತೊಡಗಿದೆ. ಅಂಥವರ ಸಾಮೂಹಿಕ ಗಡೀಪಾರು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.ರಿವೆಲ್ಲದರ ಹೊರತಾಗಿಯೂ, ಅತಿ ಹೆಚ್ಚು ವಲಸಿಗರಿರುವ ದೇಶಗಳ ಪೈಕಿ ಅಮೆರಿಕ ಅಗ್ರಸ್ಥಾನ ಕಾಯ್ದುಕೊಂಡಿದೆ.

ಜೂನ್‌ನಲ್ಲಿ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.15.4ರಷ್ಟು ಮಂದಿ ವಲಸಿಗರಿದ್ದರು. ಜನವರಿಯಲ್ಲಿ ಶೇ.15.8ರಷ್ಟಿದ್ದರು.

ಯಾಕ್ಹೀಗಾಗ್ತಿದೆ?:

ಟ್ರಂಪ್‌, ಅಕ್ರಮ ವಲಸೆಯನ್ನು ತಡೆಯುವ ನೆಪದಲ್ಲಿ ಸಾಮೂಹಿಕ ಗಡೀಪಾರು, ವಲಸಿಗರ ಬಂಧನ ಮತ್ತು ಕಠಿಣ ನಿರ್ಬಂಧಗಳಂತಹ ಕ್ರಮ ಕೈಗೊಳ್ಳುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. 2024ರಲ್ಲಿ ಜೋ ಬೈಡೆನ್‌ ಆಡಳಿತಾವಢಿಯಲ್ಲೇ ಕೆಲ ವಲಸೆ ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಟ್ರಂಪ್‌ ಬಂದಮೇಲೆ ಅದು ಅತಿರೇಕಕ್ಕೆ ಹೋಗುತ್ತಿದೆ.

ಒಬ್ಬ ಡ್ರೈವರ್‌ ಅಪಘಾತ ಮಾಡಿದನೆಂದು, ಯಾವ ವಿದೇಶಿ ಟ್ರಕ್‌ ಚಾಲಕರಿಗೂ ಪರವಾನಗಿ ಕೊಡುವುದಿಲ್ಲ ಎಂಬ ಟ್ರಂಪ್‌ರ ನಿರ್ಧಾರವೇ ಇದಕ್ಕೆ ತಾಜಾ ಉದಾಹರಣೆ.

Read more Articles on