ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಐತಿಹಾಸಿಕ ಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಅಲಾಸ್ಕಾಗೆ ಬಂದಿದ್ದ ವೇಳೆ, ಅವರ ಅಂಗರಕ್ಷಕರು, ಪುಟಿನ್‌ ಮಲ ಸಂಗ್ರಹಿಸಲು ಸೂಟ್‌ಕೇಸ್‌ ತಂದಿದ್ದರು

ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಐತಿಹಾಸಿಕ ಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಅಲಾಸ್ಕಾಗೆ ಬಂದಿದ್ದ ವೇಳೆ, ಅವರ ಅಂಗರಕ್ಷಕರು, ಪುಟಿನ್‌ ಮಲ ಸಂಗ್ರಹಿಸಲು ಸೂಟ್‌ಕೇಸ್‌ ತಂದಿದ್ದರು ಎಂದು ಅಮೆರಿಕದ ಮಾಧ್ಯಮ ‘ದ ಎಕ್ಸ್‌ಪ್ರೆಸ್‌ ಯುಎಸ್‌’ ವರದಿ ಮಾಡಿದೆ.

ಪುಟಿನ್‌ ಎಲ್ಲಿಗೇ ಹೋದರೂ ಅವರಿಗೆ ಬಿಗಿ ಕಾವಲು ಇರುತ್ತದಾದರೂ, ಭದ್ರತಾ ದೃಷ್ಟಿಯಿಂದಾಗಿ ಸಂಭಾವ್ಯ ಆಪತ್ತನ್ನು ತಡೆಯಲು ಹೀಗೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಎಲ್ಲಿಗೇ ಹೋದರೂ, ಮಲವನ್ನು ಸಂಗ್ರಹಿಸಲು ವಿಶೇಷ ಸೂಟ್‌ಕೇಸ್‌ ಕೊಂಡೊಯ್ಯಲಾಗುತ್ತದೆ

ಪುಟಿನ್‌ ಜತೆ ಈ ಸೂಟ್‌ಕೇಸ್‌ನ ವಿದೇಶ ಪ್ರಯಾಣ ಮೊದಲ ಬಾರಿಯಲ್ಲ. ಅವರು ಎಲ್ಲಿಗೇ ಹೋದರೂ, ಮಲವನ್ನು ಸಂಗ್ರಹಿಸಲು ವಿಶೇಷ ಸೂಟ್‌ಕೇಸ್‌ ಕೊಂಡೊಯ್ಯಲಾಗುತ್ತದೆ. ಕಾರಣ, ದೇಹದ ತ್ಯಾಜ್ಯಗಳಿಂದ ವ್ಯಕ್ತಿಯ ಆರೋಗ್ಯವನ್ನು ಅರಿಯಬಹುದು.

ಪುಟಿನ್‌ ಅವರು ಪಾರ್ಕಿನ್‌ಸನ್‌ನಂತಹ ನರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಶಂಕೆಯಿದೆ. ಹೀಗಿರುವಾಗ, ಅದು ಅನ್ಯ ದೇಶದವರೆದುರು ಬಹಿರಂಗವಾಗುವುದನ್ನು ತಪ್ಪಿಸಲು, ಅವರ ಭದ್ರತಾ ಸಿಬ್ಬಂದಿ ಮಲ ಸೇರಿದಂತೆ ಎಲ್ಲಾ ತ್ಯಾಜ್ಯಗಳನ್ನು ಸಂಗ್ರಹಿಸುತ್ತಾರೆ ಎನ್ನಲಾಗಿದೆ.

2017ರಲ್ಲಿ ಪುಟಿನ್‌ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗಲೂ ಅವರೊಂದಿಗೆ ಸಾಗಿಸಬಲ್ಲ ಶೌಚಾಲಯ ಮತ್ತು ಅವರ ಶೌಚವನ್ನು ಸಂಗ್ರಹಿಸಲು ಸೂಟ್‌ಕೇಸ್‌ ಒಯ್ಯಲಾಗಿತ್ತು. ಈ ಕ್ರಮವನ್ನು 1999ರಲ್ಲಿ ಪುಟಿನ್‌ ಅಧ್ಯಕ್ಷರಾದಾಗಿಂದ ಪಾಲಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.