ಲೋಕ ಚುನಾವಣೆ ಇದ್ದರೂ ಸಿಯುಇಟಿ ಪರೀಕ್ಷೆ ಅಬಾಧಿತ: ಯುಜಿಸಿ

| Published : Mar 18 2024, 01:50 AM IST

ಸಾರಾಂಶ

ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಸಿಯಟಿಟಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸ್ಪಷ್ಟಪಡಿಸಿದೆ.

ನವದೆಹಲಿ: ಲೋಕಸಭೆಗೆ ಚುನಾವಣೆ ಘೋಷಣೆಯಾಗಿರುವ ಹೊರತಾಗಿಯೂ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ನಡೆಸುವ ಸಿಯುಇಟಿ-ಯುಜಿ ಪರೀಕ್ಷೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರದು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಸ್ಪಷ್ಟಪಡಿಸಿದೆ.

ಈ ಕುರಿತು ಮಾಹಿತಿ ನೀಡಿದ ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌, ‘ಸಿಯುಇಟಿ ಪರೀಕ್ಷೆಯನ್ನು ಮುಂಚೆ ನಿಗದಿ ಮಾಡಿದಂತೆ ಮೇ 15 ಮತ್ತು 31ರೊಳಗೆ ನಡೆಸಲಾಗುವುದು.

ಪರೀಕ್ಷೆಗೆ ನೋಂದಣಿ ಮುಗಿದ ಬಳಿಕ ಅಧಿಕೃತ ದಿನಾಂಕವನ್ನು ಪರೀಕ್ಷಾರ್ಥಿಗಳಿಗೆ ತಿಳಿಸಲಾಗುವುದು’ ಎಂದು ತಿಳಿಸಿದ್ದಾರೆ.