ಸಾರಾಂಶ
5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು, ಶಾಲೆಗಳಿಗೆ ತೆರಳಿ ಆಧಾರ್ ಅಪ್‌ಡೇಟ್ ಯೋಜನೆ ಜಾರಿಗೆ ಮುಂದಾಗಿದೆ. 2 ತಿಂಗಳ ಬಳಿಕ ಹಂತಹಂತವಾಗಿ ದೇಶವ್ಯಾಪಿ ಈ ಪ್ರಕ್ರಿಯೆ ನಡೆಯಲಿದೆ.
ನವದೆಹಲಿ: 5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು, ಶಾಲೆಗಳಿಗೆ ತೆರಳಿ ಆಧಾರ್ ಅಪ್‌ಡೇಟ್ ಯೋಜನೆ ಜಾರಿಗೆ ಮುಂದಾಗಿದೆ. 2 ತಿಂಗಳ ಬಳಿಕ ಹಂತಹಂತವಾಗಿ ದೇಶವ್ಯಾಪಿ ಈ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಭುವನೇಶ್ ಕುಮಾರ್ ಮಾಹಿತಿ ನೀಡಿದ್ದು, ‘5 ವರ್ಷದ ದಾಟಿದ ಸುಮಾರು 7 ಕೋಟಿ ಮಕ್ಕಳು ಇದುವರೆಗೆ ಆಧಾರ್‌ನ್ನು ಬಯೋಮೆಟ್ರಿಕ್ ಮಾಡಿಸಿಕೊಂಡಿಲ್ಲ. ಹೀಗಾಗಿ ಪ್ರಾಧಿಕಾರ ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳ ಆಧಾರ್‌ಕಾರ್ಡ್‌ನ್ನು ಶಾಲೆಗಳಲ್ಲಿಯೇ ನವೀಕರಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ತಂತ್ರಜ್ಞಾನ ರೂಪುಗೊಳ್ಳುತ್ತಿದ್ದು, 45-60 ದಿನಗಳಲ್ಲಿ ಸಿದ್ಧವಾಗಲಿದೆ’ ಎಂದಿದ್ದಾರೆ.