ಸಾರಾಂಶ
ಮನೆ ಖರೀದಿ ವೇಳೆ ಅಗತ್ಯದಷ್ಟು ತೆರಿಗೆ ಕಟ್ಟದ ಆರೋಪದ ಹಿನ್ನೆಲೆಯಲ್ಲಿ ಬ್ರಿಟನ್ ಉಪ ಪ್ರಧಾನಿ ಆ್ಯಂಜೆಲಾ ರೈನರ್ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಉಪಪ್ರಧಾನಿಯಾಗಿದ್ದುಕೊಂಡು ತೆರಿಗೆ ತಪ್ಪಿಸಿದ ಹಿನ್ನೆಲೆಯಲ್ಲಿ ನೈತಿಕತೆ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಲಂಡನ್: ಮನೆ ಖರೀದಿ ವೇಳೆ ಅಗತ್ಯದಷ್ಟು ತೆರಿಗೆ ಕಟ್ಟದ ಆರೋಪದ ಹಿನ್ನೆಲೆಯಲ್ಲಿ ಬ್ರಿಟನ್ ಉಪ ಪ್ರಧಾನಿ ಆ್ಯಂಜೆಲಾ ರೈನರ್ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಉಪಪ್ರಧಾನಿಯಾಗಿದ್ದುಕೊಂಡು ತೆರಿಗೆ ತಪ್ಪಿಸಿದ ಹಿನ್ನೆಲೆಯಲ್ಲಿ ನೈತಿಕತೆ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಬ್ರಿಟನ್‌ನಲ್ಲಿ ದುಬಾರಿ ಹಾಗೂ ಎರಡನೇ ಮನೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಆ್ಯಂಜೆಲಾ ರೈನಾರ್ ಅವರು ಇತ್ತೀಚೆಗೆ ಇಂಗ್ಲೆಂಡ್‌ನ ಹೋವ್‌ನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಈ ವೇಳೆ ಅವರು ಅಗತ್ಯದಷ್ಟು ತೆರಿಗೆ ಪಾವತಿಸಿರಲಿಲ್ಲ. ಮನೆ ಖರೀದಿ ವೇಳೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ಅವರು ಸುಮಾರು 40 ಸಾವಿರ ಪೌಂಡ್ (47.55 ಲಕ್ಷ ರು.) ಉಳಿಸಿದ್ದರು. ಈ ಹಿಂದೆ ರೈನಾರ್ ಅವರು ವಸತಿ ಖಾತೆಯನ್ನೂ ಕೆಲಕಾಲ ವಹಿಸಿಕೊಂಡಿದ್ದರು. ಆಗ ತೆರಿಗೆ ತಪ್ಪಿಸುತ್ತಿದ್ದವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಇದೀಗ ಅವರೇ ಕಡಿಮೆ ತೆರಿಗೆ ಪಾವತಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.