ಮೊಬೈಲ್‌ ಕಂಪನಿ ರೀತಿ ಇನ್ನು ಎಲ್‌ಪಿಜಿ ಕಂಪನಿ ಬದಲಾವಣೆ

| N/A | Published : Sep 29 2025, 01:04 AM IST

ಸಾರಾಂಶ

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ವಿತರಕರ ಸೇವೆಯಿಂದ ಬೇಸತ್ತಿದ್ದಲ್ಲಿ, ಗ್ರಾಹಕರು ಇನ್ನು ತಮ್ಮಿಷ್ಟದ ಕಂಪನಿಗಳಿಂದ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಕೊಳ್ಳುಗರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿದೆ.

 ನವದೆಹಲಿ: ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ವಿತರಕರ ಸೇವೆಯಿಂದ ಬೇಸತ್ತಿದ್ದಲ್ಲಿ, ಗ್ರಾಹಕರು ಇನ್ನು ತಮ್ಮಿಷ್ಟದ ಕಂಪನಿಗಳಿಂದ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಕೊಳ್ಳುಗರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿದೆ.

ಪ್ರಸ್ತುತ ಅದೇ ಕಂಪನಿಯ ಯಾವ ಡೀಲರ್‌ ಅನ್ನು ಬೇಕಾದರೂ ಆರಿಸಿಕೊಳ್ಳುವ ಸ್ವಾತಂತ್ರವಿತ್ತು. ಉದಾಹರಣೆಗೆ, ಎಚ್‌.ಪಿ ಗ್ಯಾಸ್‌ನ ಎ ವಿತರಕರಿಂದ ಕೊಳ್ಳುತ್ತಿದ್ದವರು ಬಿ ವಿತರಕರಿಂದ ಕೊಳ್ಳಬಹುದಿತ್ತು. ಆದರೆ ಇಂಡೇನ್‌ಗೆ ಬದಲಾಯಿಸಲು ಅವಕಾಶ ಇರಲಿಲ್ಲ. ಆದರೀಗ, ಡೀಲರ್‌ಗಳ ಬದಲಾವಣೆ ಜತೆಗೆ ಕಂಪನಿಯನ್ನೂ ಬದಲಾಯಿಸಲು (ಎಚ್‌.ಪಿಯಿಂದ ಇಂಡೇನ್‌ಗೆ) ಅನುವು ಮಾಡಿಕೊಡುವ ಬಗ್ಗೆ ಚಿಂತನೆ ನಡೆದಿದೆ.

ಇದರಿಂದ, ತಡವಾಗಿ ಗ್ಯಾಸ್‌ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕಷ್ಟವಾದರೂ ಅದೇ ಕಂಪನಿಯ ಗ್ಯಾಸ್‌ ತರಿಸುವ ಬದಲು, ತಮಗೆ ಅನುಕೂಲವಾಗುವ ಕಂಪನಿಗಳತ್ತ ತಿರುಗಬಹುದು. ಈ ಬದಲಾವಣೆಗೆ ಸಂಬಂಧಿಸಿದಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ(ಪಿಎನ್‌ಜಿಆರ್‌ಬಿ) ಅನಿಸಿಕೆ, ಅಭಿಪ್ರಾಯಗಳನ್ನು ಸಲ್ಲಿಸುವಂತೆ ಜನರು, ವಿತರಕರು, ಸಂಬಂಧಿಸಿದ ಸಂಸ್ಥೆಗಳಿಗೆ ಕೋರಿದೆ. ಪ್ರಸ್ತುತ ಭಾರತದಲ್ಲಿ 32 ಕೋಟಿ ಮನೆಗಳಲ್ಲಿ ಎಲ್‌ಪಿಜಿ ಕನೆಕ್ಷನ್‌ ಇದೆ. ವಾರ್ಷಿಕ 17 ಲಕ್ಷ ದೂರುಗಳು ಗ್ರಾಹಕರಿಂದ ಬರುತ್ತಿವೆ ಎಂದು ಪಿಎನ್‌ಜಿಆರ್‌ಬಿ ತಿಳಿಸಿದೆ.

Read more Articles on