ಉ.ಪ್ರ. ಸರ್ಕಾರಿ ಸಾಮೂಹಿಕ ವಿವಾಹದಲ್ಲಿ 100 ಜೋಡಿಗೆ ಮಾತ್ರ ಅವಕಾಶ

| Published : Feb 12 2024, 01:31 AM IST / Updated: Feb 12 2024, 08:45 AM IST

ಸಾರಾಂಶ

ಬಲಿಯಾದಲ್ಲಿ ಅಕ್ರಮ ಮದುವೆ ಪತ್ತೆ ಹಿನ್ನೆಲೆ ಒಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೇವಲ 100 ಜೋಡಿಗಳಿಗೆ ಮಾತ್ರ ಸೀಮಿತಗೊಳಿಸಲು ಸರ್ಕಾರ ನಿರ್ಧರಿಸಿದೆ.

ಲಖನೌ: ಉತ್ತರಪ್ರದೇಶದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಲ್ಲಿ ಒಂದು ಸ್ಥಳದಲ್ಲಿ ಕೇವಲ 100 ಜೋಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಉತ್ತರ ಪ್ರದೇಶದ ಸಲ್ಜ ಕಲ್ಯಾಣ ಸಚಿವ ಆಸಿಮ್‌ ಅರುಣ್‌ ತಿಳಿಸಿದ್ದಾರೆ.

ಭಾನುವಾರ ಮಾತನಾಡಿದ ಅವರು, ‘ವಿವಾಹ ಯೋಜನೆಯಲ್ಲಿ ಅಕ್ರಮ ಮದುವೆಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಾಮೂಹಿಕ ವಿವಾಹದಲ್ಲಿ ಹಸೆಮಣೆಯೇರಿದ ಜೋಡಿಗಳಿಗೆ ಸ್ಥಳದಲ್ಲೇ ನೋಂದಣಿ ಮಾಡಿ ದಾಖಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ಜ.25ರಂದು ಬಲಿಯಾದಲ್ಲಿ ನಡೆ ಸರ್ಕಾರಿ ಸಾಮೂಹಿಕ ವಿವಾಹದಲ್ಲಿ 240 ನಕಲಿ ಜೋಡಿಗಳು, ಸರ್ಕಾರ ನೀಡುವ ದುಡ್ಡಿನಾಸೆಗಾಗಿ ಅಕ್ರಮ ಎಸಗಿರುವುದು ಕಂಡುಬಂದಿತ್ತು.