ಸಾರಾಂಶ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಮಂಗಳವಾರ ನಿವೃತ್ತಿ ಹೊಂದಿದ್ದಾರೆ. ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ। ಬಿ.ಆರ್.ಗವಾಯಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.
- 370 ವಿಧಿ ರದ್ಧತಿ ಸೇರಿದಂತೆ ಹಲವು ಐತಿಹಾಸಿಕ ತೀರ್ಪಿಗೆ ಸಾಕ್ಷಿ
- ಮುಂದಿನ ಸಿಜೆಐ ಬಿಆರ್ ಗವಾಯಿ ಬುಧವಾರ ಅಧಿಕಾರ ಸ್ವೀಕಾರ=ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಮಂಗಳವಾರ ನಿವೃತ್ತಿ ಹೊಂದಿದ್ದಾರೆ. ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ। ಬಿ.ಆರ್.ಗವಾಯಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಕಳೆದ ನವೆಂಬರ್‌ನಲ್ಲಿ ನ್ಯಾ.ಖನ್ನಾ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದರು. ನ್ಯಾಯಾಧೀರಾಗಿ 20 ವರ್ಷ ಸೇವೆ ಸಲ್ಲಿಸಿದ್ದ ನ್ಯಾ. ಖನ್ನಾ 6 ವರ್ಷ ಸುಪ್ರೀಂ ಜಡ್ಜ್ ಆಗಿದ್ದರು.ಈ ಅವಧಿಯಲ್ಲಿ 370ನೇ ವಿಧಿ ರದ್ದು. ಚುನಾವಣಾ ಬಾಂಡ್, ಇವಿಎಂ ವಿವಿಪ್ಯಾಟ್ ಬಗ್ಗೆ ತೀರ್ಪು, ವ್ಯಭಿಚಾರವನ್ನು ಅಪರಾಧ ಮುಕ್ತಗೊಳಿಸುವ ಪ್ರಕರಣದ ವಿಚಾರಣೆ ನಡೆಸಿದ್ದರು. ಇದರ ಜೊತೆಗೆ ನ್ಯಾ। ವರ್ಮಾ ಅವರ ನಿವಾಸದಲ್ಲಿ ಹಣ ಪತ್ತೆ ಪ್ರಕರಣ ತನಿಖೆ, ಸುಪ್ರೀಂ ನ್ಯಾಯಾಧೀಶರ ಆಸ್ತಿ ಬಹಿರಂಗ ಘೋಷಣೆಯಂತಹ ನಿರ್ಧಾರಗಳನ್ನೂ ಕೈಗೊಂಡಿದ್ದರು.ಕಡೆಯ ದಿನ ಕೋರ್ಟ್‌ನಲ್ಲಿ ಮಾತನಾಡಿದ ನ್ಯಾ.ಖನ್ನಾ ‘ನ್ಯಾಯಾಂಗದ ಬಗ್ಗೆ ಜನರ ನಂಬಿಕೆಯನ್ನು ನಾವು ಅಜ್ಞಾಪಿಸಲು ಸಾಧ್ಯವಿಲ್ಲ. ಅದನ್ನು ಗಳಿಸಬೇಕು.ಸುಪ್ರೀಂ ಕೋರ್ಟ್ ಆ ಕೆಲಸವನ್ನು ಮಾಡಿದೆ’ ಎಂದರು.