ಇಂಟೆಲ್‌ನ ಶೇ.10 ಪಾಲು ಖರೀದಿಗೆ ಟ್ರಂಪ್ ಘೋಷಣೆ

| N/A | Published : Aug 24 2025, 02:01 AM IST

ಸಾರಾಂಶ

 ಇಂಟೆಲ್‌ ಕಂಪನಿಯ ಸಿಇಒ ಲಿಪ್-ಬು ಟ್ಯಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇತ್ತೀಚೆಗೆ ಒತ್ತಡ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಮೆರಿಕ ಸರ್ಕಾರ ಇಂಟೆಲ್‌ನ ಶೇ.10ರಷ್ಟು ಪಾಲು ಖರೀದಿಸಲಿದೆ ಎಂದು ಘೋಷಿಸಿದ್ದಾರೆ.

 ವಾಷಿಂಗ್ಟನ್‌: ಇಂಟೆಲ್‌ ಕಂಪನಿಯ ಸಿಇಒ ಲಿಪ್-ಬು ಟ್ಯಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇತ್ತೀಚೆಗೆ ಒತ್ತಡ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಮೆರಿಕ ಸರ್ಕಾರ ಇಂಟೆಲ್‌ನ ಶೇ.10ರಷ್ಟು ಪಾಲು ಖರೀದಿಸಲಿದೆ ಎಂದು ಘೋಷಿಸಿದ್ದಾರೆ.

ಅಮೆರಿಕ ಸರ್ಕಾರ, ಇಂಟೆಲ್‌ನಲ್ಲಿ 78000 ಕೋಟಿ ರು. ಬಂಡವಾಳ ಹೂಡಲಿದ್ದು, ಅದನ್ನು ಕಂಪನಿ ಷೇರು ರೂಪದಲ್ಲಿ (ಶೇ.9.9ರಷ್ಟು) ಪರಿವರ್ತಿಸಲಿದೆ. ಈ ಹಣವನ್ನು ಬಳಸಿಕೊಂಡು ಇಂಟೆಲ್‌ ಕಂಪನಿ ವಿದೇಶಗಳ ಬದಲಾಗಿ ಅಮೆರಿಕದಲ್ಲೇ ತನ್ನ ಕಂಪನಿಯನ್ನು ವಿಸ್ತರಣೆ ಮಾಡಿ ಸ್ಥಳೀಯವಾಗಿ ಉದ್ಯೋಗ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿದೆ.

ಟ್ರಂಪ್ ಅವರು ಆ.22ರಂದು ಇಂಟೆಲ್ ಸಿಇಒ ಲಿಪ್-ಬು ಟ್ಯಾನ್ ಅವರನ್ನು ಭೇಟಿಯಾದ ವೇಳೆ ಒಪ್ಪಂದದ ಮಾತುಕತೆ ನಡೆದಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಇತ್ತೀಚೆಗಷ್ಟೇ, ಚೀನಾ ಕಂಪನಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಟ್ರಂಪ್, ಟ್ಯಾನ್ ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದರು.

Read more Articles on