ಅಮೆರಿಕದಲ್ಲಿದ್ದ 119 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ 2ನೇ ವಿಮಾನ ಇಂದು ಅಮೃತಸರಕ್ಕೆ

| N/A | Published : Feb 15 2025, 12:34 AM IST / Updated: Feb 15 2025, 04:19 AM IST

ಸಾರಾಂಶ

ಅಮೆರಿಕದಲ್ಲಿದ್ದ 119 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ 2ನೇ ವಿಮಾನ ಶನಿವಾರ ಪಂಜಾಬ್‌ನ ಅಮೃತಸರ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ಇದೆ.

ಅಮೃತಸರ :  ಅಮೆರಿಕದಲ್ಲಿದ್ದ 119 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ 2ನೇ ವಿಮಾನ ಶನಿವಾರ ಪಂಜಾಬ್‌ನ ಅಮೃತಸರ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ಇದೆ.

119 ಅಕ್ರಮ ವಲಸಿಗರಲ್ಲಿ ಪಂಜಾಬ್‌ನ 67, ಹರ್ಯಾಣದ 33, ಗುಜರಾತ್‌ನ 8, ಉತ್ತರ ಪ್ರದೇಶದ 3, ಗೋವಾ, ಮಹಾರಾಷ್ಟ್ರ, ರಾಜಸ್ಥಾನದ ತಲಾ ಇಬ್ಬರು, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ತಲಾ ಒಬ್ಬರು ಇದ್ದಾರೆ. ಇವರು ಇದ್ದ ವಿಮಾನ ಶನಿವಾರ ಬೆಳಗ್ಗೆ 10 ಗಂಟೆಗೆ ಲ್ಯಾಂಡ್‌ ಆಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಇನ್ನು 3ನೇ ವಿಮಾನ ಭಾನುವಾರ ಆಗಮಿಸುವ ಸಂಭವವಿದೆ.

ಟ್ರಂಪ್‌ ಆಡಳಿತ ಇತ್ತೀಚೆಗೆ 104 ಅಕ್ರಮ ವಲಸಿಗ ಭಾರತೀಯರನ್ನು ಮೊದಲ ಹಂತದಲ್ಲಿ ಗಡೀಪಾರು ಮಾಡಿತ್ತು. ಇವರಿದ್ಧ ವಿಮಾನ ಕೂಡ ಅಮೃತಸರಕ್ಕೇ ಬಂದಿತ್ತು.