₹85 ಲಕ್ಷ ಕೊಟ್ರೆ ವಿದೇಶಿಗರಿಗೆ ಗೋಲ್ಡ್‌ ಕಾರ್ಡ್‌: ಟ್ರಂಪ್‌

| Published : Sep 21 2025, 02:00 AM IST

ಸಾರಾಂಶ

ನ್ಯೂಯಾರ್ಕ್‌/ ವಾಷಿಂಗ್ಟನ್‌: ಅಧಿಕಾರಕ್ಕೆ ಬಂದ ಬಳಿಕ ವಲಸೆ ನೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ವಿದೇಶಿಗರಿಗೆ ‘ಗೋಲ್ಡ್‌ ಕಾರ್ಡ್‌ ವೀಸಾ’ ನೀಡುವುದಕ್ಕೆ ಮುಂದಾಗಿದ್ದಾರೆ. 85 ಲಕ್ಷ ರು. ಪಾವತಿಸಿದರೆ ಈ ವೀಸಾ ಸಿಗಲಿದ್ದು, ಗ್ರೀನ್‌ಕಾರ್ಡ್‌ ಪಡೆಯುವ ಹಾದಿ ಸುಗಮವಾಗಲಿದೆ.

ಗ್ರೀನ್‌ಕಾರ್ಡ್ ಪಡೆಯುವ ಹಾದಿ ಸುಗಮ

ಆ ಹಣದಿಂದ ತೆರಿಗೆ, ಸಾಲ ಕಡಿತ: ಟ್ರಂಪ್‌

ನ್ಯೂಯಾರ್ಕ್‌/ ವಾಷಿಂಗ್ಟನ್‌: ಅಧಿಕಾರಕ್ಕೆ ಬಂದ ಬಳಿಕ ವಲಸೆ ನೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ವಿದೇಶಿಗರಿಗೆ ‘ಗೋಲ್ಡ್‌ ಕಾರ್ಡ್‌ ವೀಸಾ’ ನೀಡುವುದಕ್ಕೆ ಮುಂದಾಗಿದ್ದಾರೆ. 85 ಲಕ್ಷ ರು. ಪಾವತಿಸಿದರೆ ಈ ವೀಸಾ ಸಿಗಲಿದ್ದು, ಗ್ರೀನ್‌ಕಾರ್ಡ್‌ ಪಡೆಯುವ ಹಾದಿ ಸುಗಮವಾಗಲಿದೆ.

ಗೋಲ್ಡ್‌ ಕಾರ್ಡ್‌ ನೀಡುವ ಅಧಿಕೃತ ಆದೇಶಕ್ಕೆ ಟ್ರಂಪ್‌ ಶನಿವಾರ ಸಹಿ ಹಾಕಿದ್ದಾರೆ. ಈ ಪ್ರಕಾರ 85 ಲಕ್ಷ ರು. ನೀಡುವವರು ಅಥವಾ 170 ಲಕ್ಷ ರು.ನ ಪ್ರಾಯೋಜಕತ್ವ ಪಡೆಯುವವರಿಗೆ ಇದನ್ನು ನೀಡಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರೀನ್‌ ಕಾರ್ಡ್‌ ಪಡೆಯಲು ಸುಲಭವಾಗುತ್ತದೆ ಎನ್ನಲಾಗಿದೆ. ಈ ಕಾರ್ಡ್‌ ಪಡೆಯುವವರು, ಹಣ ನೀಡುವುದರ ಜತೆಗೆ ಅಗತ್ಯ ದಾಖಲೆಗಳನ್ನೂ ಒದಗಿಸಬೇಕು. ಈ ಬಗ್ಗೆ ಮಾತನಾಡಿರುವ ಟ್ರಂಪ್‌, ‘ಗೋಲ್ಡ್‌ ಕಾರ್ಡ್‌ ಒಂದು ಅದ್ಭುತ ವಿಷಯ. ಕಂಪನಿಗಳು 85 ಲಕ್ಷ ರು. ನೀಡಿ ತಮಗೆ ಬೇಕಾದ ನುರಿತ ಕೆಲಸಗಾರರನ್ನು ಉಳಿಸಿಕೊಳ್ಳಬಹುದು. ನಾವು ಆ ಮೊತ್ತವನ್ನು ಬಳಸಿಕೊಂಡು ತೆರಿಗೆ ಮತ್ತು ಸಾಲವನ್ನು ಕಡಿಮೆ ಮಾಡುತ್ತೇವೆ’ ಎಂದಿದ್ದಾರೆ.