ಸಾರಾಂಶ
ಇರಾನ್ ಮತ್ತು ಹಮಾಸ್ ಉಗ್ರರಿಂದ ದಾಳಿಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ನೆರವು ನೀಡಲು ಮಧ್ಯಪ್ರಾಚ್ಯಕ್ಕೆ ತನ್ನ ಮತ್ತಷ್ಟು ಯುದ್ಧನೌಕೆ, ಕ್ಷಿಪಣಿ ತಡೆ ವ್ಯವಸ್ಥೆ ಸೇರಿದಂತೆ ರಕ್ಷಣಾ ತಂಡವನ್ನು ರವಾನಿಸಲು ಅಮೆರಿಕದ ನಿರ್ಧರಿಸಿದೆ.
ಟೆಲ್‌ಅವೀವ್: ಇರಾನ್ ಮತ್ತು ಹಮಾಸ್ ಉಗ್ರರಿಂದ ದಾಳಿಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ನೆರವು ನೀಡಲು ಮಧ್ಯಪ್ರಾಚ್ಯಕ್ಕೆ ತನ್ನ ಮತ್ತಷ್ಟು ಯುದ್ಧನೌಕೆ, ಕ್ಷಿಪಣಿ ತಡೆ ವ್ಯವಸ್ಥೆ ಸೇರಿದಂತೆ ರಕ್ಷಣಾ ತಂಡವನ್ನು ರವಾನಿಸಲು ಅಮೆರಿಕದ ನಿರ್ಧರಿಸಿದೆ.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆನನ್ನು ಇಸ್ರೇಲ್, ಇರಾನ್‌ನಲ್ಲಿ ಹತ್ಯೆಗೈದ ಬಳಿಕ ಎರಡೂ ದೇಶಗಳು ಇಸ್ರೇಲ್ ಮೇಲೆ ಪ್ರತೀಕಾರದ ಕ್ರಮ ಘೋಷಣೆ ಮಾಡಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಯುದ್ಧನೌಕೆ, ಖಂಡಾಂತರ ಕ್ಷಿಪಣಿ ತಡೆ ವ್ಯವಸ್ಥೆ ಹೊಂದಿರುವ ನೌಕೆ, ಡ್ರೋನ್, ಡಿಸ್ಟ್ರಾಯರ್‌ಗಳನ್ನು ರವಾನಿಸುವ ಘೋಷಣೆ ಮಾಡಿದೆ.
ಗುರುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ದೂರವಾಣಿ ಕರೆ ಮಾಡಿದ ಬೆನ್ನಲ್ಲೇ ಅಮೆರಿಕ ಹೆಚ್ಚುವರಿ ಸೇನೆ ನಿಯೋಜನೆಯ ಘೋಷಣೆ ಮಾಡಿದೆ.