ಅರುಣಾಚಲದ 27 ಸ್ಥಳಕ್ಕೆ ತನ್ನ ಹೆಸರಿಟ್ಟು ಮತ್ತೆ ಚೀನಾ ಕ್ಯಾತೆ

| N/A | Published : May 15 2025, 01:50 AM IST / Updated: May 15 2025, 05:08 AM IST

ಅರುಣಾಚಲದ 27 ಸ್ಥಳಕ್ಕೆ ತನ್ನ ಹೆಸರಿಟ್ಟು ಮತ್ತೆ ಚೀನಾ ಕ್ಯಾತೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೆಡೆ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟಿ ಗಡಿಯಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವ ಚೀನಾ, ಮತ್ತೊಂದೆಡೆ ಅರುಣಾಚಲ ಪ್ರದೇಶದ ವಿಷಯದಲ್ಲಿ ಹೊಸ ಕ್ಯಾತೆ ತೆಗೆದಿದೆ.  

 ಬೀಜಿಂಗ್‌: ಒಂದೆಡೆ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟಿ ಗಡಿಯಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವ ಚೀನಾ, ಮತ್ತೊಂದೆಡೆ ಅರುಣಾಚಲ ಪ್ರದೇಶದ ವಿಷಯದಲ್ಲಿ ಹೊಸ ಕ್ಯಾತೆ ತೆಗೆದಿದೆ. ಅರುಣಾಚಲ ಪ್ರದೇಶ ತನ್ನದೆಂದು ವಾದಿಸುತ್ತಿರುವ ಚೀನಾ, ಅಲ್ಲಿನ 15 ಬೆಟ್ಟ, 5 ವಸತಿ ಪ್ರದೇಶ, 4 ಪರ್ವತ ಮಾರ್ಗಗಳು, 2 ನದಿಗಳು ಮತ್ತು ಒಂದು ಸರೋವರಕ್ಕೆ ತನ್ನದೇ ಆದ ಹೊಸ ಹೆಸರಿಟ್ಟಿದೆ.

5 ವರ್ಷಗಳ ಬಳಿಕ ಉಭಯ ದೇಶಗಳ ಸಂಬಂಧ ಸುಧಾರಣೆಯಲ್ಲಿ ಎರಡೂ ದೇಶಗಳು ಹೊಸ ಹೆಜ್ಜೆ ಇಟ್ಟಿರುವ ಹೊತ್ತಿನಲ್ಲೇ ಚೀನಾ ಇಂಥದ್ದೊಂದು ಕೆಲಸ ಮಾಡಿದೆ.

ಈ ನಡುವೆ ಚೀನಾದ ಕೃತ್ಯವನ್ನು ವ್ಯರ್ಥ ಮತ್ತು ಅಸಂಬದ್ಧ ಎಂದು ಬಣ್ಣಿಸಿರುವ ಭಾರತದ ವಿದೇಶಾಂಗ ಸಚಿವಾಲಯವು, ರಚನಾತ್ಮಕವಾಗಿ ಹೆಸರಿಡುವ ಇಂಥ ಯಾವುದೇ ಪ್ರಯತ್ನಗಳು ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಎಂಬ ತಿರಸ್ಕರಿಸಲು ಸಾಧ್ಯವೇ ಇಲ್ಲದ ವಾಸ್ತವಾಂಶವನ್ನು ಬದಲಿಸಲು ಸಾಧ್ಯವಿಲ್ಲ ಮತ್ತು ಅರುಣಾಚಲ ಹಿಂದೆ, ಇಂದು ಮತ್ತು ಮುಂದೂ ಕೂಡಾ ಭಾರತದ ಭಾಗವಾಗಿಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿದೆ.

ಈ ಹಿಂದೆ 2017ರಲ್ಲಿ 6, 2021ರಲ್ಲಿ 15, 2023ರಲ್ಲಿ 11 ಮತ್ತು ಕಳೆದ ಏಪ್ರಿಲ್‌ನಲ್ಲಿ ಅರುಣಾಚಲದ 30 ಪ್ರದೇಶಗಳಿಗೆ ಚೀನಾ ತನ್ನದೇ ಹೆಸರು ಇಟ್ಟಿತ್ತು.

ಅರುಣಾಚಲ ಪ್ರದೇಶವು ತನ್ನ ವಶದಲ್ಲಿರುವ ಟಿಬೆಟ್‌ನ ದಕ್ಷಿಣ ಭಾಗ ಎಂಬುದು ಚೀನಾದ ವಾದ. ಆದರೆ ಈ ವಾದವನ್ನು ಭಾರತ ಆರಂಭದಿಂದಲೂ ವಿರೋಧಿಸಿಕೊಂಡೇ ಬಂದಿದೆ.