ಸಾರಾಂಶ
ಅಯೋಧ್ಯೆ: ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಸಾವಿರಾರು ಅತಿ ಗಣ್ಯರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ಬಹುತೇಕರು ಟ್ರಸ್ಟ್‌ನ ಕರೆಗೆ ಓಗೊಟ್ಟು ಸಮಾರಂಭಕ್ಕೆ ಸಾಕ್ಷಿಯಾದರು.
ಪ್ರಮುಖವಾಗಿ ನಟರಾದ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಅನುಪಮ್ ಖೇರ್, ವಿವೇಕ್ ಒಬೆರಾಯ್, ರಣದೀಪ್ ಹೂಡಾ, ವಿಕ್ಕಿ ಕೌಶಲ್, ಅಜಯ್ ದೇವಗನ್, ರಾಜ್‌ಕುಮಾರ್ ಹಿರಾನಿ, ರಣ್‌ಬೀರ್ ಕಪೂರ್, ಸುಭಾಷ್ ಗಾಯ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಕಂಗನಾ ರಾಣಾವತ್, ಶೆಫಾಲಿ ಷಾ, ಹೇಮಾ ಮಾಲಿನಿ, ಕತ್ರಿನಾ ಕೈಫ್, ಮಾಧುರಿ ದೀಕ್ಷಿತ್, ಆಲಿಯಾ ಭಟ್, ಪಾಲ್ಗೊಂಡಿದ್ದರು.
ಇನ್ನು ದಕ್ಷಿಣ ಭಾರತದಿಂದ ರಜನಿಕಾಂತ್, ಧನುಷ್, ಪವನ್ ಕಲ್ಯಾಣ್, ಚಿರಂಜೀವಿ, ರಾಮ್‌ಚರಣ್, ಪಾಲ್ಗೊಂಡಿದ್ದರು.
ಹಾಗೆಯೇ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಜರಿದ್ದರು.
ಇದರ ಜೊತೆಗೆ ಖ್ಯಾತ ಸಂಗೀತ ಗಾಯಕರಾದ ಸೋನು ನಿಗಂ, ಅನು ಮಲಿಕ್, ಶ್ರೇಯಾ ಘೋಷಾಲ್, ಹರಿಹರನ್, ಅನುರಾಧಾ ಪೊಡ್ವಾಲ್, ಶಂಕರ್ ಮಾಹಾದೇವನ್, ಸರೋದ್ ವಾದಕ ಅಮ್ಜದ್ ಅಲಿ ಖಾನ್ ಸಹ ಪಾಲ್ಗೊಂಡಿದ್ದರು.
ಅಲ್ಲದೆ ಯೋಗಗುರು ಬಾಬಾ ರಾಮ್‌ದೇವ್ ಸೇರಿದಂತೆ ಹಲವು ಸಂತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮೈಸೂರು ರಾಜ ಯದುವೀರ್ ದಂಪತಿ ಪಾಲ್ಗೊಂಡಿದ್ದರು.
ಜೊತೆಗೆ ರಿಲಯನ್ಸ್ ಉದ್ಯಮದ ದಿಗ್ಗಜ ಮುಕೇಶ್ ಅಂಬಾನಿ ಕುಟುಂಬ, ಭಾರ್ತಿ ಎಂಟರ್‌ಪ್ರೈಸಸ್‌ನ ಭಾರ್ತಿ ಮಿತ್ತಲ್, ಬಿರ್ಲಾ ಉದ್ಯಮದ ಕುಮಾರ ಮಂಗಳಂ ಬಿರ್ಲಾ ದಂಪತಿ, ಗೌತಮ್ ಅದಾನಿ, ರಿತೇಶ್ ಅಗರ್ವಾಲ್ ಸಹ ಪಾಲ್ಗೊಂಡಿದ್ದರು.
ಎಲ್ಲಕ್ಕಿಂತ ಪ್ರಮುಖ ಆಕರ್ಷಣೆಯಾಗಿ ರಮಾನಂದ ಸಾಗರ್ ನಿರ್ದೇಶನದ ರಾಮಾಯಣ ಧಾರಾವಾಹಿಯಲ್ಲಿ ಕ್ರಮವಾಗಿ ರಾಮ, ಸೀತೆ ಮತ್ತು ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ, ಅರುಣ್ ಗೋವಿಲ್, ದೀಪಿಕಾ ಚಿಕ್ಲಿಯಾ ಮತ್ತು ಸುನಿಲ್ ಲಾಹ್ರಿ ಹಾಜರಿದ್ದರು.
ಜೊತೆಗೆ ಅಯೋಧ್ಯೆ ರಾಮಮಂದಿರ ಕಟ್ಟುವಂತೆ 2019ರಲ್ಲಿ ತೀರ್ಪು ನೀಡಿದ್ದ ನ್ಯಾ. ಅಶೋಕ್ ಭೂಷಣ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಹಾಗೆಯೇ ಗೋಧ್ರಾ ಹತ್ಯಾಕಾಂಡದಲ್ಲಿ ಮಡಿದಿದ್ದ 19 ಕರಸೇವಕರ ಮಕ್ಕಳ ಕುಟುಂಬ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ಕರ್ನಾಟಕದಿಂದ ಪಾಲ್ಗೊಂಡಿದ್ದ ಗಣ್ಯರು
ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಕರ್ನಾಟಕದ ಹಲವು ದಿಗ್ಗಜರೂ ಪಾಲ್ಗೊಂಡಿದ್ದರು. ಪ್ರಮುಖವಾಗಿ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್̤
ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ ದಂಪತಿ, ಮತ್ತು ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಹಾಜರಾಗಿದ್ದರು.
ಅಲ್ಲದೆ ರವಿಶಂಕರ್ ಗುರೂಜಿ, ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಂಪತಿ ಮತ್ತು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.