ಚೆನ್ನೈ: ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌, ಶುಕ್ರವಾರ ನಟಿ ತ್ರಿಶಾ ಕೃಷ್ಣನ್‌ ಅವರೊಂದಿಗೆ ಒಂದೇ ಕಾರಿನಲ್ಲಿ ಬಂದಿಳಿದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ವಿಜಯ್‌ರ ಪತ್ನಿ ಸಂಗೀತ ಇತ್ತೀಚೆಗಷ್ಟೇ, ತಮ್ಮ ಪತಿ ಇನ್ನೊಬ್ಬಾಕೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ದೂರಿ, ವಿಚ್ಛೇದನಕ್ಕೆ ಕೋರಿ ಕೋರ್ಟ್‌ಗೆ ಹೋಗಿದ್ದರು. ಇದರ ಬೆನ್ನಲ್ಲೇ ವಿಜಯ್ ಮತ್ತು ತ್ರಿಶಾ ಮ್ಯಾಚಿಂಗ್‌ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

==

ಜೆನ್‌-ಝಿ ದಂಗೆ ಕಂಡ ನೇಪಾಳ ಸಂಸತ್ತಿಗೆ ಮತದಾನ ಶಾಂತಿ

ಕಾಠ್ಮಂಡು: ಕಳೆದ ಸೆಪ್ಟೆಂಬರ್‌ನಲ್ಲಿ ಕೆ.ಪಿ. ಶರ್ಮಾ ಓಲಿ ಸರ್ಕಾರವನ್ನು ಉರುಳಿಸಿದ್ದ ಜೆನ್‌-ಝಿ ದಂಗೆಯ ಬಳಿಕ ನೇಪಾಳದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಶೇ.60ರಷ್ಟು ಮತ ಚಲಾವಣೆ ಆಗಿದೆ.ಸದ್ಯ ಅಧಿಕಾರದಲ್ಲಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥೆ ಸುಶೀಲಾ ಕರ್ಕಿ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು, ರ್‍ಯಾಪರ್‌ ಆಗಿ, ಬಳಿಕ ರಾಜಕಾರಣ ಪ್ರವೇಶ ಮಾಡಿ ರಾಷ್ಟ್ರೀಯ ಸ್ವತಂತ್ರ ಪಕ್ಷದಿಂದ ಕಣಕ್ಕಿಳಿದಿರುವ ಬಲೇಂದ್ರ ಶಾ ಕೂಡ ಮತದಾನದ ಹಕ್ಕನ್ನು ಚಲಾಯಿಸಿದರು. 275 ಸದಸ್ಯಬಲದ ನೇಪಾಳ ಸಂಸತ್ತಿನ 165 ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದ್ದು, 3406 ಅಭ್ಯರ್ಥಿಗಳು ಕಣದಲ್ಲಿದ್ದಾರೆ.=====2025ರ ಸೆಪ್ಟೆಂಬರ್‌ನಲ್ಲಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲಿನ ಸರ್ಕಾರದ ನಿರ್ಬಂಧದ ಕಾರಣ ಆರಂಭವಾದ ಜೆನ್‌-ಝಿ ಪ್ರತಿಭಟನೆಯು ಬಳಿಕ ಭ್ರಷ್ಟಾಚಾರ, ನಿರುದ್ಯೋಗ, ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಯ ಕಡೆಗೂ ತಿರುಗಿ, ಒಲಿ ಅವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತ್ತು.ಸದ್ಯ ಅಧಿಕಾರದಲ್ಲಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥೆ ಸುಶೀಲಾ ಕರ್ಕಿ ಅವರು ರಾಜಧಾನಿ ಕಾಠ್ಮಂಡುವಿನ ಹೊರವಲಯದ ಧಾಪಸಿಯಲ್ಲಿ ಮತದಾನ ಮಾಡಿದ್ದಾರೆ. ಧನುಷಾ-4 ಕ್ಷೇತ್ರದಿಂದ ಪ್ರಧಾನಿ ಸ್ಪರ್ಧೆಗಿಳಿದಿರುವ ಕಾಂಗ್ರೆಸ್‌ ಅಧ್ಯಕ್ಷ ಗಗನ ಥಾಪಾ ಕೂಡ ಕಾಠ್ಮಂಡು-4ರಲ್ಲಿ ವೋಟ್‌ ಮಾಡಿದರು ಹಾಗೂ ಈ ಚುನಾವಣೆಯು, ಸಂವಿಧಾನಸ ಪುನಃಸ್ಥಾಪನೆಗೆ ಅಗತ್ಯ ಎಂದರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು, ರ್‍ಯಾಪರ್‌ ಆಗಿ, ಬಳಿಕ ರಾಜಕಾರಣ ಪ್ರವೇಶ ಮಾಡಿ ರಾಷ್ಟ್ರೀಯ ಸ್ವತಂತ್ರ ಪಕ್ಷದಿಂದ ಕಣಕ್ಕಿಳಿದಿರುವ ಬಲೇಂದ್ರ ಶಾ ಕೂಡ ಮತದಾನದ ಹಕ್ಕನ್ನು ಚಲಾಯಿಸಿದರು.ಸದ್ಯ ಅಧಿಕಾರದಲ್ಲಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥೆ ಸುಶೀಲಾ ಕರ್ಕಿ ಅವರು ರಾಜಧಾನಿ ಕಾಠ್ಮಂಡುವಿನ ಹೊರವಲಯದ ಧಾಪಸಿಯಲ್ಲಿ ಮತದಾನ ಮಾಡಿದ್ದಾರೆ. ಧನುಷಾ-4 ಕ್ಷೇತ್ರದಿಂದ ಪ್ರಧಾನಿ ಸ್ಪರ್ಧೆಗಿಳಿದಿರುವ ಕಾಂಗ್ರೆಸ್‌ ಅಧ್ಯಕ್ಷ ಗಗನ ಥಾಪಾ ಕೂಡ ಕಾಠ್ಮಂಡು-4ರಲ್ಲಿ ವೋಟ್‌ ಮಾಡಿದರು ಹಾಗೂ ಈ ಚುನಾವಣೆಯು, ಸಂವಿಧಾನಸ ಪುನಃಸ್ಥಾಪನೆಗೆ ಅಗತ್ಯ ಎಂದರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು, ರ್‍ಯಾಪರ್‌ ಆಗಿ, ಬಳಿಕ ರಾಜಕಾರಣ ಪ್ರವೇಶ ಮಾಡಿ ರಾಷ್ಟ್ರೀಯ ಸ್ವತಂತ್ರ ಪಕ್ಷದಿಂದ ಕಣಕ್ಕಿಳಿದಿರುವ ಬಲೇಂದ್ರ ಶಾ ಕೂಡ ಮತದಾನದ ಹಕ್ಕನ್ನು ಚಲಾಯಿಸಿದರು.


==

ಎಲ್ಲೆಂದರಲ್ಲಿ ಪ್ರಾರ್ಥನೆ ಮಾಡೋದು ಧಾರ್ಮಿಕ ಹಕ್ಕು ಅಲ್ಲ: ಬಾಂಬೆ ಹೈ

ಏರ್ಪೋರ್ಟ್‌ ಬಳಿ ನಮಾಜ್‌ಗೆ ನಕಾರ

ಮುಂಬೈ: ರಮ್ಜಾನ್‌ ಸಮಯದಲ್ಲಿ ವಿಮಾನ ನಿಲ್ದಾಣದ ಬಳಿ ನಮಾಜ್‌ ಮಾಡಲು ಅನುವು ಮಾಡುವಂತೆ ಕೋರಲಾಗಿದ್ದ ಮನವಿಗಳನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್‌, ‘ಎಲ್ಲಿ ಬೇಕಾದರೂ ಪ್ರಾರ್ಥನೆ (ನಮಾಜ್‌) ಮಾಡುವುದು ಧಾರ್ಮಿಕ ಹಕ್ಕು ಎನಿಸಿಕೊಳ್ಳುವುದಿಲ್ಲ’ ಎಂದಿದೆ.ಛತ್ರಪತಿ ಶಿವಾಜಿ ಮಹಾರಾಜ್‌ ಏರ್ಪೋರ್ಟ್‌ ಬಳಿಯಿರುವ ಖಾಲಿ ಜಾಗದಲ್ಲಿ ನಮಾಜ್‌ ಮಾಡಲು ಅನುಮತಿಸಬೇಕು ಅಥವಾ ಅದಕ್ಕಾಗಿ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ರಮ್ಜಾನ್‌ ತಿಂಗಳಲ್ಲಿ ನಮಾಜ್‌ ಕಡ್ಡಾಯವಾದರೂ, ವಿಮಾನ ನಿಲ್ದಾಣದಂತಹ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸ್ಥಳಗಳಲ್ಲಿ ಧರ್ಮಕ್ಕಿಂದ ಭದ್ರತೆ ಮುಖ್ಯವಾಗುತ್ತದೆ ’ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ, ‘ಸಮೀಪದಲ್ಲಿರುವ ಮದರಸಾಗಳಲ್ಲಿ ನಮಾಜ್‌ ಮಾಡಿ’ ಎಂದು ಸೂಚಿಸಿದೆ.

ಈ ಮೊದಲು, ನಮಾಜ್‌ಗಾಗಿ ಸೂಕ್ತ ಜಾಗವನ್ನು ನೀಡುವಂತೆ ಕೋರ್ಟ್‌ ವಿಮಾನನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ ಜನದಟ್ಟಣೆ, ಭದ್ರತಾ ಕಾಳಜಿ ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳಿಂದಾಗಿ, ಸಮೀಕ್ಷೆ ನಡೆಸಲಾದ 7 ಸ್ಥಳಗಳು ಪ್ರಾರ್ಥನೆಗೆ ಸೂಕ್ತವಾಗಿಲ್ಲ ಎಂದು ಅವರು ಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

==

ಅಸ್ಸಾಂನಲ್ಲಿ ಸುಖೋಯ್‌ ನಾಪತ್ತೆ: ಪತನಕ ಶಂಕೆ

ನವದೆಹಲಿ: ಅಸ್ಸಾಂನ ಜೋರ್ಹಾಟ್‌ನಿಂದ ಹೊರಟಿದ್ದ ಸುಖೋಯ್‌-ಸು30 ಯುದ್ಧವಿಮಾನವೊಂದರ ರಾಡಾರ್‌ ಜತೆಗಿನ ಸಂಪರ್ಕ ಕಡಿತವಾಗಿದ್ದು, ನಾಪತ್ತೆಯಾಗಿದೆ. ಇದು ಗುಡ್ಡಗಾಡಿನಲ್ಲಿ ಪತನವಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಗುರುವಾರ ಸಂಜೆ 7.42ಕ್ಕೆ ಕೊನೆಯ ಬಾರಿ ರಾಡಾರ್‌ ಸಂಪರ್ಕಕ್ಕೆ ಬಂದಿದ್ದ ವಿಮಾನ, ಬಳಿಕ ಎತ್ತ ಹೋಯಿತು, ಏನಾಯಿತು ಎಂಬುದು ತಿಳಿದಿಲ್ಲ. ಚೋಕಿಹೊಳ ಬಳಿಯ ನಿಲಿಪ್ ಬ್ಲಾಕ್ ಸಮೀಪದ ಬೆಟ್ಟದ ಕಡೆಯಿಂದ ಸಂಜೆ 7ಕ್ಕೆ ಭಾರೀ ಸ್ಫೋಟದ ಸದ್ದೊಂದು ಕೇಳಿಬಂದದ್ದಾಗಿ ಹಾಗೂ ಅತ್ತ ಕಡೆಯಿಂದ ಹೊಗೆ ಎದ್ದದ್ದು ಕಂಡದ್ದಾಗಿ ಸ್ಥಳೀಯರು ಹೇಳಿದ್ದಾರೆ. ವಿಮಾನ ಪತ್ತೆಗೆ ಶೋಧ ನಡೆಯುತ್ತಿದೆ.