ಮುಂಬೈ: ರೇಮಂಡ್ ಗ್ರೂಪ್‌ನ ಮಾಜಿ ಮುಖ್ಯಸ್ಥ ಮತ್ತು ಪದ್ಮಭೂಷಣ ಪುರಸ್ಕೃತ ವಿಜಯಪತ್ ಸಿಂಘಾನಿಯಾ (87) ಶನಿವಾರ ನಿಧನರಾದರು. ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಮುಂಬೈನ ಚಂದನವಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ. 

1980ರಲ್ಲಿ ರೇಮಂಡ್ಸ್‌ನ ಚುಕ್ಕಾಣಿ ಹಿಡಿದಿದ್ದ ಸಿಂಘಾನಿಯಾ

1980ರಲ್ಲಿ ರೇಮಂಡ್ಸ್‌ನ ಚುಕ್ಕಾಣಿ ಹಿಡಿದಿದ್ದ ಸಿಂಘಾನಿಯಾ, ಭಾರತದ ಉಡುಪು ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದರು. ಸಾಂಪ್ರದಾಯಿಕ ವುಲನ್‌ ಬಟ್ಟೆ ಬದಲು ಸಿಂಥೆಟಿಕ್‌, ಡೆನಿಮ್‌ ಬಟ್ಟೆಗಳನ್ನು ಪರಿಚಯಿಸಿದರು.

ಪೈಲಟ್‌ ಕೂಡ ಆಗಿದ್ದ ಸಿಂಘಾನಿಯಾ


 ಪೈಲಟ್‌ ಕೂಡ ಆಗಿದ್ದ ಅವರು, 67ನೇ ವಯಸ್ಸಲ್ಲಿ ಹಾಟ್‌ ಏರ್‌ ಬಲೂನ್‌ನಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದ್ದರು.