ಗಣ್ಯರಿಗೆ ಇನ್ನು ಎನ್‌ಎಸ್‌ಜಿ ಭದ್ರತೆ ಇಲ್ಲ!

| Published : Jun 12 2024, 12:32 AM IST

ಸಾರಾಂಶ

ಜೀವಬೆದರಿಕೆ ಇರುವ ಪ್ರಮುಖ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಭದ್ರತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯ ಸಿದ್ಧತೆ ನಡೆಸಿದ್ದು, ದೇಶದ 9 ವಿವಿಐಪಿಗಳಿಗೆ ನೀಡಲಾಗುತ್ತಿದ್ದ ಎನ್‌ಎಸ್‌ಜಿ ಭದ್ರತೆಯ ಶ್ರೇಣಿಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಜೀವಬೆದರಿಕೆ ಇರುವ ಪ್ರಮುಖ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಭದ್ರತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯ ಸಿದ್ಧತೆ ನಡೆಸಿದ್ದು, ದೇಶದ 9 ವಿವಿಐಪಿಗಳಿಗೆ ನೀಡಲಾಗುತ್ತಿದ್ದ ಎನ್‌ಎಸ್‌ಜಿ ಭದ್ರತೆಯ ಶ್ರೇಣಿಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರದ 9 ವಿವಿಐಪಿಗಳಿಗೆ ಭದ್ರತೆ ನೀಡುತ್ತಿದ್ದ ಸುಮಾರು 450 ಎನ್‌ಎಸ್‌ಜಿ ಸಿಬ್ಬಂದಿಯನ್ನು ಸಿಆರ್‌ಪಿಎಫ್‌ ಇಲ್ಲವೇ ಸಿಐಎಸ್‌ಎಫ್‌ನಂತಹ ಅರೆಸೇನಾ ಪಡೆಗಳಿಗೆ ವರ್ಗಾಯಿಸಲು ಸರ್ಕಾರ ಚಿಂತಿಸಿದೆ. ಇದಕ್ಕಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್‌) ಗಣ್ಯರಿಗೆ ಭದ್ರತೆ ನೀಡಲು ಹೊಸ ಘಟಕ ಸ್ಥಾಪಿಸಿ ಅದಕ್ಕೆ ಎಸ್‌ಎಸ್‌ಜಿ ಎಂದು ನಾಮಕರಣ ಮಾಡಲಾಗುತ್ತದೆ. ಹಾಗೆಯೇ ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಸೇವೆಯನ್ನೂ ಅರೆಸೇನಾ ಪಡೆಗಳಿಗೆ ವರ್ಗಾಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಏಕೆ ತೆಗೆತ?:

ಎನ್‌ಎಸ್‌ಜಿಯಲ್ಲಿ ಕಮಾಂಡೋ ಮಟ್ಟದ ಅಧಿಕಾರಿಗಳಿದ್ದು, ಅವರು ರಾಷ್ಟ್ರದೊಳಗೆ ಏಕಕಾಲದಲ್ಲಿ ಹಲವು ಕಡೆ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಅಗತ್ಯವಾಗಿರುತ್ತಾರೆ. ಆದರೆ ಎಲ್ಲ ಗಣ್ಯರಿಗೆ ಅಷ್ಟು ಬೃಹತ್‌ ಪ್ರಮಾಣದಲ್ಲಿ ಭದ್ರತೆ ನೀಡುವುದು ನಿರರ್ಥಕ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.