ತೆರಿಗೆ ಪಾವತಿಯಲ್ಲಿ ಶಾರುಖ್‌ ನಂ.1, ವಿಜಯ್‌, ಸಲ್ಮಾನ್‌.. ಟಾಪ್‌ 5ರಲ್ಲಿ ಯಾರ್ಯಾರು?

| Published : Sep 05 2024, 12:41 AM IST / Updated: Sep 05 2024, 04:22 AM IST

Sharukh Khan

ಸಾರಾಂಶ

ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮೊದಲ ಸ್ಥಾನ ಪಡೆದಿದ್ದಾರೆ. ವಿಜಯ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಮತ್ತು ವಿರಾಟ್ ಕೊಹ್ಲಿ ಕೂಡ ಟಾಪ್ 5 ಪಟ್ಟಿಯಲ್ಲಿದ್ದಾರೆ.

ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯೊಂದು ಬಿಡುಗಡೆಯಾಗಿದೆ. ಅದರನ್ವಯ ನಟ ಶಾರುಖ್‌ ಖಾನ್‌ (92 ಕೋಟಿ ರು.), ತಮಿಳು ನಟ ವಿಜಯ್‌ (80 ಕೋಟಿ ರು.), ಸಲ್ಮಾನ್‌ ಖಾನ್‌ (75 ಕೋಟಿ ರು.), ಅಮಿತಾಭ್‌ ಬಚ್ಚನ್‌ (71 ಕೋಟಿ ರು.), ಕ್ರಿಕೆಟಿಗ ವಿರಾಟ್‌ ಕೊಹ್ಲಿ (66 ಕೋಟಿ ರು.) ಟಾಪ್‌ 5 ಸ್ಥಾನ ಪಡೆದುಕೊಂಡಿದ್ದಾರೆ.

ಉಳಿದಂತೆ ಪಟ್ಟಿಯಲ್ಲಿ ಸ್ಥಾನ ಪಡೆದ ಸೆಲೆಬ್ರೆಟಿಗಳೆಂದರೆ, ನಟ ಅಜಯ್‌ ದೇವಗನ್‌ 42 ಕೋಟಿ ರು., ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ 38 ಕೋಟಿ ರು., ರಣಬೀರ್‌ ಕಪೂರ್‌ 36 ಕೋಟಿ ರು., ಸಚಿನ್‌ ತೆಂಡೂಲ್ಕರ್‌ 28 ಕೋಟಿ ರು., ಹೃತಿಕ್‌ ರೋಶನ್‌ 28 ಕೋಟಿ ರು., ನಟ ಕಪಿಲ್‌ ಶರ್ಮಾ 26 ಕೋಟಿ ರು., ಸೌರವ್ ಗಂಗೂಲಿ 23 ಕೋಟಿ ರು., ಕರೀನಾ ಕಪೂರ್‌ 20 ಕೋಟಿ ರು., ಶಾಹಿದ್‌ ಕಪೂರ್‌ 14 ಕೋಟಿ ರು., ಮೋಹನ್ ಲಾಲ್‌ 14 ಕೋಟಿ ರು., ಅಲ್ಲು ಅರ್ಜುನ್‌ 14 ಕೋಟಿ ರು., ಹಾರ್ದಿಕ್‌ ಪಾಂಡ್ಯ 13 ಕೋಟಿ ರು., ನಟಿ ಕಿಯಾರಾ ಅಡ್ವಾಣಿ 12 ಕೋಟಿ ರು., ಕತ್ರೀನಾ ಕೈಫ್‌ 11 ಕೋಟಿ ರು., ಆಮಿರ್‌ ಖಾನ್‌ 10 ಕೋಟಿ ರು., ರಿಷಭ್‌ ಪಂತ್‌ 10 ಕೋಟಿ ರು. ಸೇರಿದ್ದಾರೆ.