ಕನ್ನಡಿಗ ಡಾ. ವಿವೇಕ್ ಮೂರ್ತಿಗೆ ಅಮೆರಿಕ ಸರ್ಕಾರದಿಂದ ಮತ್ತೊಂದು ಮಹತ್ವದ ಹುದ್ದೆ

| Published : Jan 11 2024, 01:30 AM IST / Updated: Jan 11 2024, 11:08 AM IST

ಕನ್ನಡಿಗ ಡಾ. ವಿವೇಕ್ ಮೂರ್ತಿಗೆ ಅಮೆರಿಕ ಸರ್ಕಾರದಿಂದ ಮತ್ತೊಂದು ಮಹತ್ವದ ಹುದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ಡಬ್ಲುಎಚ್‌ಒನಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಮೂರ್ತಿ ಮರುನೇಮಕವಾಗಿದ್ದಾರೆ. ಈಗಾಗಲೇ ಅಮೆರಿಕದ ಸರ್ಜನ್‌ ಜನರಲ್‌ ಆಗಿರುವ ಮೂರ್ತಿಗೆ ಮತ್ತೊಂದು ಮಹತ್ವದ ಹುದ್ದೆ ದೊರಕಿದಂತಾಗಿದೆ.

ಪಿಟಿಐ ವಾಷಿಂಗ್ಟನ್‌

ಕರ್ನಾಟಕದ ಮಂಡ್ಯ ಮೂಲದ ಅಮೆರಿಕದ ಸರ್ಜನ್‌ ಜನರಲ್‌ ಡಾ. ವಿವೇಕ್ ಮೂರ್ತಿ ಅವರನ್ನು ಅಧ್ಯಕ್ಷ ಜೋ ಬೈಡನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್ಒ) ಕಾರ್ಯಕಾರಿ ಮಂಡಳಿಯಲ್ಲಿ ಅಮೆರಿಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಮತ್ತೊಮ್ಮೆ ನಾಮನಿರ್ದೇಶನ ಮಾಡಿದ್ದಾರೆ.

ಮೂರ್ತಿ ಅವರ ನಾಮನಿರ್ದೇಶನ ಪ್ರಸ್ತಾವನೆಗೆ ಅನುಮೋದನೆ, 2022ರ ಅಕ್ಟೋಬರ್‌ನಿಂದ ಅಮೆರಿಕ ಸಂಸತ್ತಿನ ಸದನವಾದ ಸೆನೆಟ್‌ ಮುಂದೆ ಬಾಕಿ ಇದೆ. ಅದಕ್ಕೆ ಈಗ ಬೈಡೆನ್‌ ಅಂತಿಮ ಮುದ್ರೆ ಒತ್ತಿದ್ದಾರೆ.

46 ವರ್ಷದ ಮೂರ್ತಿ 2021ರ ಮಾರ್ಚ್‌ನಿಂದ ದೇಶದ 21ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಡಿಯಲ್ಲಿ 19ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅಮೆರಿಕದ ಆರೋಗ್ಯ ನೀತಿ ರೂಪಿಸುವಲ್ಲಿ ಸರ್ಜನ್ ಜನರಲ್ ಪಾತ್ರ ಮಹತ್ವದ್ದಾಗಿದೆ.

ಕರ್ನಾಟಕದಿಂದ ಅಮೆರಿಕಕ್ಕೆ ವಲಸೆ ಬಂದವರ ಕುಟುಂಬದಲ್ಲಿ ಹುಟ್ಟಿದ ಮೂರ್ತಿ ಮಿಯಾಮಿಯಲ್ಲಿ ಬೆಳೆದರು. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.