ಆಕಸ್ಮಿಕವಾಗಿ ಭಾರತ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ಬಂಧಿಸಲ್ಪಟ್ಟಿದ್ದ ಬಿಎಸ್‌ಎಫ್‌ ಸಿಬ್ಬಂದಿ ಪೂರ್ಣಂ ಕುಮಾರ್‌ ಶಾ ಅವರಿಗೆ 3 ವಾರ ನಿದ್ದೆ ಮಾಡಗೊಡದೆ, ಶೌಚಕ್ಕೂ ಬಿಡದೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಆಕಸ್ಮಿಕವಾಗಿ ಭಾರತ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ಬಂಧಿಸಲ್ಪಟ್ಟಿದ್ದ ಬಿಎಸ್‌ಎಫ್‌ ಸಿಬ್ಬಂದಿ ಪೂರ್ಣಂ ಕುಮಾರ್‌ ಶಾ ಅವರಿಗೆ 3 ವಾರ ನಿದ್ದೆ ಮಾಡಗೊಡದೆ, ಶೌಚಕ್ಕೂ ಬಿಡದೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಶಾ ಅವರಿಗೆ ದೈಹಿಕ ಹಿಂಸೆ ನೀಡಿಲ್ಲವಾದರೂ, ಶೌಚ, ನಿದ್ದೆ ಮಾಡಲು ಬಿಡದೆ, ಹಲವು ಬಾರಿ ಕಣ್ಣಿಗೆ ಪಟ್ಟಿ ಕಟ್ಟಿ ಮಾನಸಿಕವಾಗಿ ಹಿಂಸಿಸಲಾಗಿದೆ. ಜತೆಗೆ, ಗಡಿ ಭದ್ರತಾ ಪಡೆ ಯೋಧರ ನಿಯೋಜನೆ ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನಲಾಗಿದೆ.

ಕಾಶ್ಮೀರದಲ್ಲಿ ಪಹಲ್ಗಾಂ ದಾಳಿ ನಡೆದ ಮರುದಿನ(ಏ.22ರಂದು) ಶಾ, ನೆರಳನ್ನರಸುತ್ತ ಅಕಸ್ಮಾತಾಗಿ ಪಾಕ್‌ ಗಡಿಯೊಳಗೆ ಹೋಗಿ ಬಂಧಿತರಾಗಿದ್ದರು. ಅದಾದ 3 ವಾರಗಳ ಬಳಿಕ(ಮೇ 14)ರಂದು ಅವರ ಬಿಡುಗಡೆಯಾಗಿದ್ದು, ಸದ್ಯ ಭಾರತೀಯ ಅಧಿಕಾರಿಗಳು ಅವರ ತನಿಖೆ ನಡೆಸುತ್ತಿದ್ದಾರೆ.