ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಬೆಂಬಲಿಸಲ್ಲ: ಅಮೆರಿಕದ ಪ್ರಭಾವಶಾಲಿ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌

| Published : Oct 27 2024, 02:29 AM IST / Updated: Oct 27 2024, 05:00 AM IST

ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಬೆಂಬಲಿಸಲ್ಲ: ಅಮೆರಿಕದ ಪ್ರಭಾವಶಾಲಿ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ಅತ್ಯಂತ ಪ್ರಭಾವಶಾಲಿ ಪತ್ರಿಕೆಗಳ ಪೈಕಿ ಒಂದಾದ ‘ವಾಷಿಂಗ್ಟನ್‌ ಪೋಸ್ಟ್‌’, ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದೇ ಇರಲು ನಿರ್ಧರಿಸಿದೆ. ಈ ಕುರಿತು ಪತ್ರಿಕೆಯ ಪ್ರಕಾಶಕ ವಿಲ್‌ ಲೂಯಿಸ್‌ ಮಾಹಿತಿ ನೀಡಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಅತ್ಯಂತ ಪ್ರಭಾವಶಾಲಿ ಪತ್ರಿಕೆಗಳ ಪೈಕಿ ಒಂದಾದ ‘ವಾಷಿಂಗ್ಟನ್‌ ಪೋಸ್ಟ್‌’, ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದೇ ಇರಲು ನಿರ್ಧರಿಸಿದೆ. ಈ ಕುರಿತು ಪತ್ರಿಕೆಯ ಪ್ರಕಾಶಕ ವಿಲ್‌ ಲೂಯಿಸ್‌ ಮಾಹಿತಿ ನೀಡಿದ್ದಾರೆ.

ಕಳೆದ 36 ವರ್ಷಗಳಲ್ಲೇ ಮೊದಲ ಬಾರಿಗೆ ಪತ್ರಿಕೆ ಇಂಥ ನಿಲುವು ವ್ಯಕ್ತಪಡಿಸಿದ್ದಕ್ಕೆ ಪತ್ರಿಕೆಯ ಗ್ರಾಹಕರು ಮತ್ತು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂಥ ನಿರ್ಧಾರಕ್ಕೆ ಪತ್ರಿಕೆಯ ಮಾಲೀಕ ಜೆಫ್‌ ಬೆಜೋಸ್‌ ಕಾರಣ ಎಂಬ ವರದಿಗಳ ಬೆನ್ನಲ್ಲೇ ಬೆಜೋಸ್‌ ವಿರುದ್ಧವೂ ಗ್ರಾಹಕರು ಹರಿಹಾಯ್ದಿದ್ದು, 2000ಕ್ಕೂ ಹೆಚ್ಚು ಜನರು ಪತ್ರಿಕೆಯ ಚಂದಾದಾರಿಕೆ ರದ್ದು ಮಾಡಿದ್ದಾರೆ. ಅಲ್ಲದೆ ಬೆಜೋಸ್‌ ಒಡೆತನದ ಅಮೆಜಾನ್‌ ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಅವರಿಗೆ ಪಾಠ ಕಲಿಸಬೇಕು ಎಂದು ಹಲವು ಚಂದಾಚಾರರು ಕರೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಈ ಬಾರಿ ಕಮಲಾ ಹ್ಯಾರಿಸ್‌ಗೆ ಬೆಂಬಲು ಸೂಚಿಸುವ ಕರಡು ಸಂಪಾದಕೀಯವನ್ನು ಪತ್ರಿಕೆಯ ಸಂಪಾದಕೀಯ ವಿಭಾಗದ ಸಿಬ್ಬಂದಿ ಸಿದ್ಧಪಡಿಸಿದ್ದರು. ಆದರೆ ಅದು ಸಂಪಾದಕೀಯ ಮಂಡಳಿಯನ್ನು ತಲುಪಲೇ ಇಲ್ಲ. ಇದಕ್ಕೆ ಬೆಜೋಸ್‌ ಅವರ ಸೂಚನೆಯೇ ಕಾರಣ ಎನ್ನಲಾಗಿದೆ.