ಅಮುಲ್‌ ಐಸ್‌ ಕ್ರೀಂನಲ್ಲಿ ಜರಿ!

| Published : Jun 17 2024, 01:31 AM IST / Updated: Jun 17 2024, 05:12 AM IST

ಸಾರಾಂಶ

ಉತ್ತರಪ್ರದೇಶ ನೊಯ್ಡಾದಲ್ಲಿ ಮಹಿಳೆಯೊಬ್ಬರಿಗೆ ಆನ್‌ಲೈನ್‌ ಮೂಲಕ ಅಮುಲ್‌ ಐಸ್‌ ಕ್ರೀಂ ಆರ್ಡರ್‌ ಮಾಡಿದ್ದು, ಅದರಲ್ಲಿ ಜರಿ (ಶತಪದಿ) ಪತ್ತೆಯಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.

ನೊಯ್ಡಾ: ಉತ್ತರಪ್ರದೇಶ ನೊಯ್ಡಾದಲ್ಲಿ ಮಹಿಳೆಯೊಬ್ಬರಿಗೆ ಆನ್‌ಲೈನ್‌ ಮೂಲಕ ಅಮುಲ್‌ ಐಸ್‌ ಕ್ರೀಂ ಆರ್ಡರ್‌ ಮಾಡಿದ್ದು, ಅದರಲ್ಲಿ ಜರಿ (ಶತಪದಿ) ಪತ್ತೆಯಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನ ವೈದ್ಯರೊಬ್ಬರಿಗೆ ಯುಮ್ಮು ಐಸ್‌ಕ್ರೀಂನಲ್ಲಿ ಮಾನವನ ಬೆರಳು ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಈಗ ಮಹಿಳೆಯೊಬ್ಬರಿಗೆ ಜರಿ ಕಾಣಿಸಿಕೊಂಡಿದೆ.

ನಡೆದಿದ್ದು ಏನು?:

ಮಹಿಳೆಯೊಬ್ಬರು ತನ್ನ 5 ವರ್ಷದ ಮಗನಿಗಾಗಿ ಮಾವಿನ ಹಣ್ಣು ಜ್ಯೂಸ್‌ ತಯಾರಿಸಲು ಬ್ಲಿಂಕಿಟ್‌ ಆ್ಯಪ್‌ ಮೂಲಕ ಅಮುಲ್‌ ಐಸ್‌ ಕ್ರೀಂಅನ್ನು ಆರ್ಡರ್‌ ಮಾಡಿದ್ದರು. ಈ ನಡುವೆ ಮಾವಿನ ಹಣ್ಣಿನ ಜ್ಯೂಸ್‌ ತಯಾರಿಸಲು ಐಸ್‌ ಕ್ರೀಂ ಬಾಕ್ಸ್‌ ಅನ್ನು ತೆರೆದಾಗ ಅದರಲ್ಲಿ ಜರಿ ಕಂಡುಬಂದಿದೆ.

ಈ ವಿಷಯವನ್ನು ಸಚಿನ್‌ ಗುಪ್ತಾ ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಉತ್ಪನ್ನ ತಯಾರಿಕೆ ಅಮುಲ್‌ ತನ್ನ ನೈತಿಕತೆಯನ್ನು ಗಾಳಿಗೆ ಬಿಟ್ಟಿದೆ. ಇದಕ್ಕೆ ಕಂಪನಿ ಏನು ಉತ್ತರ ನೀಡಲಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.