ಸಾರಾಂಶ
ಸೋನಂ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹಾ, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯಾರಿಗೂ ತಮ್ಮ ಪ್ರೀತಿ ಬಗ್ಗೆ ತಿಳಿಯದೇ ಇರಲಿ ಎಂದು ಸೋನಂಳನ್ನು ರಾಜ್ ಅಕ್ಕ ಎನ್ನುತ್ತಿದ್ದ.
ಇಂದೋರ್: ಹನಿಮೂನ್ ವೇಳೆ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ ಆತನ ಪತ್ನಿ ಸೋನಂ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹಾ, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯಾರಿಗೂ ತಮ್ಮ ಪ್ರೀತಿ ಬಗ್ಗೆ ತಿಳಿಯದೇ ಇರಲಿ ಎಂದು ಸೋನಂಳನ್ನು ರಾಜ್ ಅಕ್ಕ ಎನ್ನುತ್ತಿದ್ದ. ಜತೆಗೆ ಆಕೆಗೆ ಪ್ರತಿ ವರ್ಷ ರಾಖಿ ಕಟ್ಟುತ್ತಿದ್ದ ಎಂದ ವಿಷಯ ಬೆಳಕಿಗೆ ಬಂದಿದೆ.
ಈ ನಡುವೆ ಮೃತ ರಘುವಂಶಿ ಮನೆಗೆ ಮಂಗಳವಾರ ಭೇಟಿ ನೀಡಿದ್ದ ಸೋನಂಳ ಸೋದರ ಗೋವಿಂದ, ‘ತನ್ನ ತಂಗಿ ಸೋನಂಳೇ ನಿಸ್ಸಂಶಯವಾಗಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ್ದಾಳೆ. ಇಲ್ಲಿಯವರೆಗೆ ಸಿಕ್ಕಿರುವ ಸಾಕ್ಷ್ಯಗಳ ಪ್ರಕಾರ, ಈ ಕೊಲೆಯನ್ನು ಅವಳೇ ಮಾಡಿದ್ದಾಳೆ ಎಂದು ನನಗೆ ಶೇ.100 ಖಚಿತವಾಗಿದೆ. ಈ ಪ್ರಕರಣದ ಎಲ್ಲಾ ಆರೋಪಿಗಳು ರಾಜ್ ಕುಶ್ವಾಹನ ಜೊತೆ ಸಂಬಂಧ ಹೊಂದಿದ್ದಾರೆ. ನಾವು ಸೋನಂ ಜೊತೆ ಸಂಬಂಧವನ್ನು ಮುರಿದುಕೊಂಡಿದ್ದೇವೆ. ರಾಜಾ ಅವರ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ’ ಎಂದರು.
ತಪ್ಪೊಪ್ಪಿಗೆ:
ಈ ನಡುವೆ ರಘುವಂಶಿ ಹತ್ಯೆ ಕುರಿತು ಸೋನಂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಜೊತೆಗೆ ಘಟನೆ ವಿವರಿಸುವಾಗ ಕಣ್ಣೀರಿಟ್ಟಿದ್ದಾಳೆ ಎಂದು ವರದಿಗಳು ತಿಳಿಸಿವೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))