ಪ್ರತಿಭಟನೆ ಬಿಟ್ಟು ದಸರಾ ಆಚರಿಸಿ: ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ವಿವಾದ

| Published : Sep 11 2024, 01:17 AM IST / Updated: Sep 11 2024, 05:18 AM IST

ಸಾರಾಂಶ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರತಿಭಟನೆ ಕೈಬಿಟ್ಟು ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಂತ್ರಸ್ತ ವೈದ್ಯ ಕುಟುಂಬ ಹಾಗೂ ಪ್ರತಿಭಟನಾಕಾರರು ಮಮತಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೋಲ್ಕತಾ:‘ ಪ್ರತಿಭಟನೆ ಕೈ ಬಿಟ್ಟು ದಸರಾ (ದುರ್ಗಾ ಪೂಜಾ) ಹಬ್ಬದಲ್ಲಿ ಪಾಲ್ಗೊಳ್ಳಿ. ಸಿಬಿಐ ಆದಷ್ಟು ಶೀಘ್ರದಲ್ಲಿ ವಿಚಾರಣೆ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಿ’ ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 

ಸಂತ್ರಸ್ತ ವೈದ್ಯ ಕುಟುಂಬದವರು ಹಾಗೂ ಪ್ರತಿಭಟನಾಕಾರರು ಇದಕ್ಕೆ ಗರಂ ಆಗಿದ್ದು, ‘ಆಕೆ ಕುಟುಂಬದಲ್ಲಿಯೂ ಈ ರೀತಿ ಆಗಿದ್ದರೆ ಇದೇ ಮಾತು ಹೇಳುತ್ತಿದ್ದರೆ? ಎಂದು ವೈದ್ಯೆ ತಾಯಿ ಕಿಡಿ ಕಾರಿದ್ದಾರೆ.

ವೈದ್ಯೆ ತಾಯಿ ಮಾತನಾಡಿ, ‘ಹೆಣ್ಣು ಮಗಳ ತಾಯಿಯಾಗಿರುವ ನನಗೆ ಇದು ಅಮಾನವೀಯ ರೀತಿ ಕಾಣುತ್ತದೆ. ನನ್ನ ಮಗಳನ್ನು ಕಳೆದುಕೊಂಡಿದ್ದೇನೆ ಅವರು ನಮ್ಮ ಮಗಳನ್ನು ಹಿಂದಿರುಗಿಸಲಿ, ಆಕೆಯ ಕುಟುಂಬದಲ್ಲಿ ಈ ರೀತಿ ಆಗಿದ್ದರೆ ಇಂತಹದ್ದೇ ಮಾತುಗಳನ್ನಾಡುತ್ತಿದ್ದಾರಾ? ಮಗಳ ಜೊತೆ ದುರ್ಗಾ ಪೂಜೆ ಆಚರಿಸುತ್ತಿದ್ದೆವು. ಆದರೆ ಮುಂದೆ ಯಾವ ಹಬ್ಬಗಳನ್ನು ಆಚರಿಸುವುದಿಲ್ಲ. ಅವರ ಮಾತು ಸಂವೇದನಾ ರಹಿತವಾಗಿದೆ’ ಎಂದಿದ್ದಾರೆ.