ಮದುವೆಗೆ ಮುನ್ನವೇ ವರ ಓಡಿಹೋದ್ರೆ ನಾವೇನು ಮಾಡಲಾಗುತ್ತೆ: ಯಾದವ್‌

| Published : May 13 2024, 12:01 AM IST / Updated: May 13 2024, 04:53 AM IST

ಮದುವೆಗೆ ಮುನ್ನವೇ ವರ ಓಡಿಹೋದ್ರೆ ನಾವೇನು ಮಾಡಲಾಗುತ್ತೆ: ಯಾದವ್‌
Share this Article
  • FB
  • TW
  • Linkdin
  • Email

ಸಾರಾಂಶ

ಮದುವೆಗೆ ಮುನ್ನವೇ ವರ ಓಡಿಹೋದರೆ ನಾವೇನು ಮಾಡಲಾಗುತ್ತದೆ ಎಂದು ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದಿರುವ ಬಗ್ಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

ಇಂದೋರ್‌: ಮದುವೆಗೆ ಮುನ್ನವೇ ವರ ಓಡಿಹೋದರೆ ನಾವೇನು ಮಾಡಲಾಗುತ್ತದೆ ಎಂದು ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದಿರುವ ಬಗ್ಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

 ಮದುವೆಗೆಂದು ಇಡೀ ಗ್ರಾಮವನ್ನ ಕರೆದು ಎಲ್ಲಾ ಸಿದ್ಧತೆ ಮಾಡಿಕೊಂಡಾಗ, ಮದುವೆಗೆ ಮುನ್ನವೇ ವರ ಓಡಿ ಹೋದರೆ ನಾವೇನು ಮಾಡಬೇಕು ಎಂದು ಹೇಳಿದ್ದಾರೆ. ಏ.29ರಂದು ಇಂದೋರ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್‌ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿದ್ದು, ಬಿಜೆಪಿಗರ ಜೊತೆ ಕಾಣಿಸಿಕೊಂಡಿದ್ದಾರೆ. 

ಇದಕ್ಕೆ ಹತಾಶರಾದ ಕಾಂಗ್ರೆಸಿಗರು ಇಂದೋರ್‌ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಹಾಕುವದಕ್ಕಿಂತ ನೋಟಾಗೆ ಮತಹಾಕಲು ಕರೆ ನೀಡಿದ್ದರು. ಮೇ 13ರಂದು ಇಲ್ಲಿ ಚುನಾವಣೆ ನಡೆಯಲಿದೆ.