ಸಾರಾಂಶ
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಕ್ಕಳು ಆರ್‌ಎಸ್ಎಸ್ ಗೀತೆ ಹಾಡಿದ್ದಕ್ಕೆ ಸಂಬಂಧಿಸಿದಂತೆ ಕೇರಳದ ಶಾಲೆ ಮಕ್ಕಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶಭಕ್ತಿ ಗೀತೆ ಹಾಡುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ.
ಹಾಡಲ್ಲಿ ರಾಷ್ಟ್ರೀಯ ಏಕತೆಗೆ ವಿರುದ್ಧವಾದ ಅಂಶ ಇರಲಿಲ್ಲ
ರೈಲ್ವೆಯಿಂದ ಟ್ವೀಟ್ ಡಿಲೀಟ್: ಪ್ರಾಂಶುಪಾಲ ಆಕ್ರೋಶಕೊಚ್ಚಿ: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಕ್ಕಳು ಆರ್‌ಎಸ್ಎಸ್ ಗೀತೆ ಹಾಡಿದ್ದಕ್ಕೆ ಸಂಬಂಧಿಸಿದಂತೆ ಕೇರಳದ ಶಾಲೆ ಮಕ್ಕಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶಭಕ್ತಿ ಗೀತೆ ಹಾಡುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ.ಮಕ್ಕಳು ಆರ್‌ಎಸ್ಎಸ್ ಗೀತೆ ಹಾಡಿದ್ದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಅದರ ವಿಡಿಯೋವನ್ನು ದಕ್ಷಿಣ ರೈಲ್ವೆ ತನ್ನ ಎಕ್ಸ್ ಖಾತೆಯಿಂದ ತೆಗೆದುಹಾಕಿದೆ. ಇದನ್ನು ಪ್ರಶ್ನಿಸಿ ಕೇರಳದ ಶಾಲೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ‘ದೇಶ ಭಕ್ತಿ ಗೀತೆ ಹಾಡುವುದರಲ್ಲಿ ತಪ್ಪೇನಿದೆ?’ ಎಂದು ಕೇಳಿದೆ. ಜತೆಗೆ, ಟ್ವೀಟ್ ತೆಗೆದುಹಾಕಿದ್ದಕ್ಕೂ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದೆ.)
ಪ್ರಾಂಶುಪಾಲ ಡಿಂಟೋ ಕೆ.ಪಿ ಅವರು ಬರೆದ ಪತ್ರದಲ್ಲಿ, ‘ಪರಂಪವಿತ್ರಮಾತಾಮೇ ಮಣ್ಣಿಲ್ ಭಾರತಾಂಬಯೆ ಪೂಜಿಕನ್ ಎಂಬ ಮಲಯಾಳಂನ ದೇಶಭಕ್ತಿ ಗೀತೆಯನ್ನು ಮಕ್ಕಳು ಹಾಡಿದ್ದರು. ಈ ಗೀತೆಯಲ್ಲಿ ದೇಶದ ಜಾತ್ಯತೀತತೆ ಅಥವಾ ರಾಷ್ಟ್ರೀಯ ಏಕತೆಗೆ ವಿರುದ್ಧವಾದ ಯಾವುದೇ ಅಂಶ ಇರಲಿಲ್ಲ. ಹಾಡಿನಿಂದ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ತುಂಬಾ ಹೆಮ್ಮೆ ಪಟ್ಟಿದ್ದರು. ದಕ್ಷಿಣ ರೈಲ್ವೆ ಸಹ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಂಡಿತ್ತು. ಆದರೆ ಕೆಲ ಮಾಧ್ಯಮಗಳು ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ ತಕ್ಷಣ ರೈಲ್ವೆ ಅದನ್ನು ತೆಗೆದು ಹಾಕಿತು. ಈ ಬೆಳವಣಿಗೆ ಎಲ್ಲರಿಗೆ ನೋವು ತಂದಿದ್ದಲ್ಲದೆ, ಮಕ್ಕಳಲ್ಲಿ ದೇಶಸೇವೆಯ ಆಸಕ್ತಿಯನ್ನೂ ಕುಗ್ಗಿಸುತ್ತದೆ’ ಎಂದಿದ್ದಾರೆ. ಜತೆಗೆ, ‘ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿ, ತಾಯ್ನಾಡನ್ನು ಪೂಜಿಸಬಾರದೆ?’ ಎಂದು ಪ್ರಶ್ನಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))