ವಿಕಸಿತ ಭಾರತಕ್ಕೆ ಉತ್ತಮ ಮೂಲಸೌಕರ್ಯ ಅಗತ್ಯ: ಮೋದಿ

| Published : Nov 09 2025, 02:15 AM IST

ವಿಕಸಿತ ಭಾರತಕ್ಕೆ ಉತ್ತಮ ಮೂಲಸೌಕರ್ಯ ಅಗತ್ಯ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿಯೂ ಮೂಲಸೌಕರ್ಯಗಳು ಉತ್ತಮಗೊಳ್ಳುತ್ತಿದ್ದು, ನಮ್ಮ ದೇಶ ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- ಇದಕ್ಕೆ ಪೂರಕವಾಗಿ ದೇಶದ ರೈಲು ಜಾಲದ ಅಭಿವೃದ್ಧಿ- 4 ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ

- ಇದರಲ್ಲಿ ಬೆಂಗಳೂರು-ಎರ್ನಾಕುಲಂ ರೈಲೂ ಒಂದುಪಿಟಿಐ ವಾರಾಣಸಿ

ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿಯೂ ಮೂಲಸೌಕರ್ಯಗಳು ಉತ್ತಮಗೊಳ್ಳುತ್ತಿದ್ದು, ನಮ್ಮ ದೇಶ ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಸ್ವಕ್ಷೇತ್ರ ವಾರಾಣಸಿಯ ಬನಾರಸ್‌ ರೈಲುನಿಲ್ದಾಣದಲ್ಲಿ ಎರ್ನಾಕುಲಂ-ಬೆಂಗಳೂರು. ಬನಾರಸ್‌-ಖಜುರಾಹೋ, ಫಿರೋಜ್‌ಪುರ-ದೆಹಲಿ, ಲಖನೌ-ಸಹಾರನ್ಪುರ ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ವಿಶ್ವಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಆರ್ಥಿಕ ಬೆಳವಣಿಗೆಗೆ ದೊಡ್ಡ ಕಾರಣವೆಂದರೆ ಅವುಗಳ ಮೂಲಸೌಕರ್ಯ. ಪ್ರಗತಿ ಸಾಧಿಸಿದ ಪ್ರತಿ ರಾಷ್ಟ್ರದಲ್ಲೂ, ಅದರ ಹಿಂದಿನ ಪ್ರೇರಕ ಶಕ್ತಿ ಮೂಲಸೌಕರ್ಯ ಅಭಿವೃದ್ಧಿಯೇ ಆಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಿಂದ ಹಲವಾರು ವಂದೇ ಭಾರತ್ ರೈಲುಗಳು ಮತ್ತು ವಿಮಾನಗಳು ಆಗಮಿಸುತ್ತಿರುವುದರಿಂದ, ಈ ಎಲ್ಲಾ ಬೆಳವಣಿಗೆಗಳು ಈಗ ಪ್ರಗತಿಯೊಂದಿಗೆ ನಂಟು ಹೊಂದಿವೆ. ಇಂದು ಭಾರತವೂ ಈ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ’ ಎಂದು ತಿಳಿಸಿದರು.

ಇದಲ್ಲದೆ, ದೇಶದ ಪೌರಾಣಿಕ ಸ್ಥಳಗಳನ್ನು ವಂದೇ ಭಾರತ್‌ ರೈಲುಗಳು ಸಂಪರ್ಕಿಸುತ್ತಿದ್ದು, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುತ್ತಿದೆ. ವಿದೇಶಿಗರೂ ಈ ರೈಲುಗಳನ್ನು ಕೊಂಡಾಡುತ್ತಿದ್ದಾರೆ. ಇಂದು ವಂದೇ ರೈಲುಗಳ ಸಂಖ್ಯೆ 160ಕ್ಕೆ ಏರಿದೆ ಎಂದು ಮೋದಿ ಬಣ್ಣಿಸಿದರು.