98 ವಸಂತ ಪೂರೈಸಿದ ಬಿಜೆಪಿ ಭೀಷ್ಮ ಆಡ್ವಾಣಿ

| Published : Nov 09 2025, 02:15 AM IST

ಸಾರಾಂಶ

ಬಿಜೆಪಿ ಭೀಷ್ಮ, ಮಾಜಿ ಉಪ ಪ್ರಧಾನಿ, ಭಾರತ ರತ್ನ ಲಾಲ್‌ಕೃಷ್ಣ ಆಡ್ವಾಣಿ ಅವರು ಶನಿವಾರ 98 ವಸಂತಗಳನ್ನು ಪೂರೈಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಲ್ಲದೆ ಹಲವಾರು ಗಣ್ಯರು ಅಡ್ವಾಣಿ ಅವರ ಮನೆಗೇ ತೆರಳಿ ಶುಭಾಶಯ ಕೋರಿದ್ದಾರೆ.

- ಮೋದಿ, ವೆಂಕಯ್ಯ ನಾಯ್ಡು ಸೇರಿ ಅನೇಕರಿಂದ ಜನ್ಮದಿನ ಶುಭಾಶಯ

ನವದೆಹಲಿ: ಬಿಜೆಪಿ ಭೀಷ್ಮ, ಮಾಜಿ ಉಪ ಪ್ರಧಾನಿ, ಭಾರತ ರತ್ನ ಲಾಲ್‌ಕೃಷ್ಣ ಆಡ್ವಾಣಿ ಅವರು ಶನಿವಾರ 98 ವಸಂತಗಳನ್ನು ಪೂರೈಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಲ್ಲದೆ ಹಲವಾರು ಗಣ್ಯರು ಅಡ್ವಾಣಿ ಅವರ ಮನೆಗೇ ತೆರಳಿ ಶುಭಾಶಯ ಕೋರಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲಿ 1927ರಲ್ಲಿ ಜನಿಸಿದ್ದ ಆಡ್ವಾಣಿ ದೇಶ ವಿಭಜನೆ ವೇಳೆ ಭಾರತದ ಕಡೆಗೆ ಬಂದಿದ್ದರು. ರಾಮಜನ್ಮಭೂಮಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಬಿಜೆಪಿಗೆ ದೇಶದಲ್ಲಿ ನೆಲೆ ತಂದುಕೊಟ್ಟಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಆಡ್ವಾಣಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ವೃದ್ಧಾಪ್ಯ ಹಾಗೂ ಅನಾರೋಗ್ಯದ ಕಾರಣ ರಾಜಕೀಯ ನೇಪಥ್ಯಕ್ಕೆ ಸರಿದಿದ್ದಾರೆ.