''ಮಾಜಿ ಬಾಸ್‌ ಸೋನಿಯಾ ಗಾಂಧಿ ವಿರುದ್ಧ ನಜ್ಮಾ ಕಿಡಿ : ಬರ್ಲಿನ್‌ನಿಂದ ಫೋನ್‌ ಮಾಡಿದ್ದೆ - ಒಂದು ಗಂಟೆ ಕಾಯಿಸಿದ್ದರು''

| Published : Dec 02 2024, 01:16 AM IST / Updated: Dec 02 2024, 04:55 AM IST

''ಮಾಜಿ ಬಾಸ್‌ ಸೋನಿಯಾ ಗಾಂಧಿ ವಿರುದ್ಧ ನಜ್ಮಾ ಕಿಡಿ : ಬರ್ಲಿನ್‌ನಿಂದ ಫೋನ್‌ ಮಾಡಿದ್ದೆ - ಒಂದು ಗಂಟೆ ಕಾಯಿಸಿದ್ದರು''
Share this Article
  • FB
  • TW
  • Linkdin
  • Email

ಸಾರಾಂಶ

‘1999ರಲ್ಲಿ ಅಂತರ್‌ ಸಂಸದೀಯ ಒಕ್ಕೂಟದ (ಐಪಿಯು) ಅಧ್ಯಕ್ಷೆಯಾಗಿ ಆಯ್ಕೆಯಾದ ವಿಚಾರವನ್ನು ತಿಳಿಸಲು ಬರ್ಲಿನ್‌ನಿಂದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಫೋನ್‌ ಮಾಡಿದ್ದೆ. ಆದರೆ ಅವರ ಸಿಬ್ಬಂದಿ ಮೇಡಂ ಬ್ಯುಸಿ ಇದ್ದಾರೆ ಎಂದು ಹೇಳಿ ಒಂದು ಗಂಟೆ ಕಾಯಿಸಿದ್ದರು

ನವದೆಹಲಿ: ‘1999ರಲ್ಲಿ ಅಂತರ್‌ ಸಂಸದೀಯ ಒಕ್ಕೂಟದ (ಐಪಿಯು) ಅಧ್ಯಕ್ಷೆಯಾಗಿ ಆಯ್ಕೆಯಾದ ವಿಚಾರವನ್ನು ತಿಳಿಸಲು ಬರ್ಲಿನ್‌ನಿಂದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಫೋನ್‌ ಮಾಡಿದ್ದೆ. ಆದರೆ ಅವರ ಸಿಬ್ಬಂದಿ ಮೇಡಂ ಬ್ಯುಸಿ ಇದ್ದಾರೆ ಎಂದು ಹೇಳಿ ಒಂದು ಗಂಟೆ ಕಾಯಿಸಿದ್ದರು’ ಎಂದು ಮಾಜಿ ರಾಜ್ಯಸಭೆ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.

ತಮ್ಮ ಆತ್ಮಚರಿತ್ರೆ ‘ದಿ ಪರ್ಸ್ಯೂಟ್‌ ಆಫ್‌ ಡೆಮಾಕ್ರೆಸಿ: ಬಿಯಾಂಡ್‌ ಪಾರ್ಟಿ ಲೈನ್ಸ್‌’ನಲ್ಲಿ ಈ ಬಗ್ಗೆ ಬರೆದಿರುವ ಅವರು, ‘ಐಪಿಯು ಅಧ್ಯಕ್ಷೆಯಾಗಿ ಆಯ್ಕೆಯಾದಾಗ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಫೋನ್‌ ಮಾಡಿ ಭಾರತಕ್ಕೆ, ಮುಸ್ಲಿಂ ಮಹಿಳೆಗೆ ಬಂದ ಗೌರವಕ್ಕೆ ಹೆಮ್ಮೆ ಪಟ್ಟಿದ್ದರು. 

ಸೋನಿಯಾ ಗಾಂಧಿಗೆ ವಿಚಾರ ಹೇಳಲು ಫೋನ್ ಮಾಡಿದಾಗ ಸಿಬ್ಬಂದಿ ‘ಮೇಡಂ ಬ್ಯುಸಿ’ ಆಗಿದ್ದಾರೆ ಎಂದರು. ಬರ್ಲಿನ್‌ನಿಂದ ಅಂತಾರಾಷ್ಟ್ರೀಯ ಕರೆ ಮಾಡಿದ್ದೇನೆ ಎಂದರೂ ಒಂದು ಗಂಟೆ ಕಾಯಿಸಿದರು’ ಎಂದು ಕಿಡಿಕಾರಿದ್ದಾರೆ.

ಕೆಲವು ವರ್ಷ ಹಿಂದೆ ನಜ್ಮಾ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.