ಸಾರಾಂಶ
ರಫೇಲ್‌ಗೆ ಕಟ್ಟಿದ ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ತ ಯಾವಾಗ ತೆಗೀತೀರಿ? ಕಾಂಗ್ರೆಸ್ ನಾಯಕ ಅಜಯ ರಾಯ್ ಅವರು ಮೋದಿ ಸರ್ಕಾರವನ್ನುಪ್ರಶ್ನಿಸಿದ್ದಾರೆ.
ಲಖನೌ: ರಫೇಲ್‌ಗೆ ಕಟ್ಟಿದ ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ತ ಯಾವಾಗ ತೆಗೀತೀರಿ? ಯಾವಾಗ ಅವುಗಳ ಮೂಲಕ ಪಾಕ್ ಮೇಲೆ ಯುದ್ಧ ಮಾಡುತ್ತೀರಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಜಯ ರಾಯ್ ಅವರು ಮೋದಿ ಸರ್ಕಾರವನ್ನುಪ್ರಶ್ನಿಸಿದ್ದಾರೆ.
ಭಾನುವಾರ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿ, ‘ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ರಫೇಲ್‌ಗೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ಪೂಚಿಸಿದ್ದರು. ಹಾಗಿದ್ದರೆ ರಫೇಲ್ ನಿಂದ ನಿಂಬೆ ಮತ್ತು ಮೆಣಸಿನಕಾಯಿಯನ್ನು ಅವರು ಯಾವಾಗ ತೆಗೆಯುತ್ತಾರೋ’ ಎಂದು ಕೇಳಿದರು.