ಸಾರಾಂಶ
‘ವೈಯುಕ್ತಿಕವಾಗಿ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಯುದ್ಧ ಅಂತೀವಲ್ಲ, ಯುದ್ಧ ಮಾಡೋದ್ರಿಂದ ಯಾರಿಗಾದರೂ ಒಳಿತಾಗುತ್ತಾ? ಇದರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ, ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು’ ಎಂದು ನಟಿ ರಮ್ಯಾ ಹೇಳಿದ್ದಾರೆ.
ಬೆಂಗಳೂರು : ‘ವೈಯುಕ್ತಿಕವಾಗಿ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಯುದ್ಧ ಅಂತೀವಲ್ಲ, ಯುದ್ಧ ಮಾಡೋದ್ರಿಂದ ಯಾರಿಗಾದರೂ ಒಳಿತಾಗುತ್ತಾ? ಇದರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ, ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು’ ಎಂದು ನಟಿ ರಮ್ಯಾ ಹೇಳಿದ್ದಾರೆ.
ಪಹಲ್ಗಾಂ ದುರಂತಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ‘ನಾವು ನಮ್ಮ ನಾಯಕರನ್ನು ಆಯ್ಕೆ ಮಾಡಿ ಕಳಿಸೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ? ಹೀಗಿರುವಾಗ ರಕ್ಷಣೆ ನೀಡದೆ ಯುದ್ಧ ಅಂದರೆ ಬಲಿಯಾಗೋದು ಅಮಾಯಕರಲ್ವಾ’ ಎಂದು ಪ್ರಶ್ನಿಸಿದ್ದಾರೆ.
‘ಪಹಲ್ಗಾಂ ಘಟನೆಗೆ ಸಂಬಂಧಿಸಿ ಇಂಟೆಲಿಜೆನ್ಸ್‌ನ ವೈಫಲ್ಯ, ರಕ್ಷಣಾ ಲೋಪ ಪ್ರಶ್ನೆ ಮಾಡಲೇ ಬೇಕು. ಗಡಿಭಾಗದಂಥಾ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಭದ್ರತೆ ಇರಲೇಬೇಕಲ್ವಾ. ಈ ಲೋಪ ಯಾಕೆ ಆಯ್ತು ಅನ್ನುವುದನ್ನು ಅವಲೋಕಿಸಬೇಕು’ ಎಂದು ಹೇಳಿದ್ದಾರೆ.
‘ಹಿಂದೆ ಉಪೇಂದ್ರ ಜೊತೆಗಿನ ಸಿನಿಮಾವೊಂದರ ಶೂಟಿಂಗ್‌ಗಾಗಿ ಪಹಲ್ಗಾಂಗೆ ಹೋಗಿ ಬಂದಿದ್ದೇನೆ. ಆಗ ಫುಲ್ ಸೆಕ್ಯುರಿಟಿ ಕೊಟ್ಟಿದ್ದರು. ಆದರೆ ಜನಸಾಮಾನ್ಯರಿಗೂ ರಕ್ಷಣೆ ಬೇಕು. ರಕ್ಷಣೆ ಬಗ್ಗೆ ಚಿಂತಿಸಬೇಕೇ ಹೊರತು ಯುದ್ಧದ ಬಗ್ಗೆ ಅಲ್ಲ’ ಎಂದಿದ್ದಾರೆ.