ಸಾರಾಂಶ
ಕಳೆದ ವರ್ಷ ದೇಶದ ಮೇಲೆ ನಡೆದ ಪ್ಯಾಲೆಸ್ತೀನಿ ಉಗ್ರ ದಾಳಿಯ ವೇಳೆ ಗುಪ್ತಚರ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲಿ ಸೇನೆ, ತನ್ನ ಗುಪ್ತಚರ ವಿಭಾಗದ ಎಲ್ಲಾ ಯೋಧರಿಗೆ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆ ಕಡ್ಡಾಯ ಮಾಡಿದೆ.
ಗುಪ್ತಚರ ವಿಭಾಗ ಸದೃಢಗೊಳಿಸಲು ಕ್ರಮಜೆರುಸಲೆಂ: ಕಳೆದ ವರ್ಷ ದೇಶದ ಮೇಲೆ ನಡೆದ ಪ್ಯಾಲೆಸ್ತೀನಿ ಉಗ್ರ ದಾಳಿಯ ವೇಳೆ ಗುಪ್ತಚರ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲಿ ಸೇನೆ, ತನ್ನ ಗುಪ್ತಚರ ವಿಭಾಗದ ಎಲ್ಲಾ ಯೋಧರಿಗೆ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆ ಕಡ್ಡಾಯ ಮಾಡಿದೆ.
1200 ಇಸ್ರೇಲಿ ನಾಗರಿಕರ ಬಲಿ ಪಡೆದ ಹಮಾಸ್ ದಾಳಿಯ ವೇಳೆ, ಇಂಥದ್ದೊಂದು ಮಾಹಿತಿಯನ್ನು ಮೊದಲೇ ಗ್ರಹಿಸುವಲ್ಲಿ ವಿಫಲವಾಗಿದ್ದರೆ ಗುಪ್ತಚರ ವಿಭಾಗದ ಬಹುತೇಕ ಯೋಧರಿಗೆ ಅರೇಬಿಕ್ ಭಾಷೆ ಬರದೇ ಇರುವುದೇ ಕಾರಣ ಎಂದು ಕಂಡುಬಂದಿತ್ತು.ಈ ಹಿನ್ನೆಲೆಯಲ್ಲಿ ಇಸ್ರೇಲಿ ಗುಪ್ತಚರ ವಿಭಾಗದ ಎಲ್ಲಾ ಯೋಧರು ಮತ್ತು ಅಧಿಕಾರಿಗಳಿಗೆ ಇಸ್ಲಾಂ ಅಧ್ಯಯನ, ಅರೇಬಿಕ್ ಭಾಷೆ ಕಲಿಕೆ, ಹೌತಿ ಮತ್ತು ಇರಾಕಿ ಆಡುಭಾಷೆ ಕಲಿಕೆ ಕಡ್ಡಾಯ ಮಾಡಲಾಗಿದೆ. ಇದು ಶತ್ರು ದೇಶಗಳಿಂದ ಗುಪ್ತಚರ ಮಾಹಿತಿ ಸಂಗ್ರಹಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಇಸ್ರೇಲಿ ಸೇನೆ ನಂಬಿದೆ.
ಈ ಹಿಂದೆ ಭಾರತ ಸರ್ಕಾರ ಕೂಡಾ ಚೀನಾ ಗಡಿಯಲ್ಲಿ ನಿಯೋಜಿತ ಯೋಧರಿಗೆ ಚೀನಾದ ಮ್ಯಾಂಡರಿನ್ ಭಾಷೆ ಕಲಿಕೆಗೆ ಕ್ರಮ ಕೈಗೊಂಡಿತ್ತು.