ಸೇನಾ ಸಮವಸ್ತ್ರದಲ್ಲೇ ಪತಿನಮಾಂಶ್‌ಗೆ ಪತ್ನಿ ನಮನ

| Published : Nov 24 2025, 02:15 AM IST

ಸಾರಾಂಶ

ದುಬೈ ವೈಮಾನಿಕ ಪ್ರದರ್ಶನದ ವೇಳೆ ತೇಜಸ್‌ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್‌ ವಿಂಗ್ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕಾಂಗ್ರಾದಲ್ಲಿ ನಡೆದಿದೆ. ಈ ವೇಳೆ ವಾಯುಪಡೆಯಲ್ಲಿ ಉದ್ಯೋಗದಲ್ಲಿರುವ ಸ್ಯಾಲ್‌ ಪತ್ನಿ ಸಮವಸ್ತ್ರದಲ್ಲೇ ಅಂತಿಮಕ್ರಿಯೆಯಲ್ಲಿ ಭಾಗಿಯಾದರು.

ಶಿಮ್ಲಾ: ದುಬೈ ವೈಮಾನಿಕ ಪ್ರದರ್ಶನದ ವೇಳೆ ತೇಜಸ್‌ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್‌ ವಿಂಗ್ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕಾಂಗ್ರಾದಲ್ಲಿ ನಡೆದಿದೆ. ಈ ವೇಳೆ ವಾಯುಪಡೆಯಲ್ಲಿ ಉದ್ಯೋಗದಲ್ಲಿರುವ ಸ್ಯಾಲ್‌ ಪತ್ನಿ ಸಮವಸ್ತ್ರದಲ್ಲೇ ಅಂತಿಮಕ್ರಿಯೆಯಲ್ಲಿ ಭಾಗಿಯಾದರು.

ನ.21ರಂದು ದುರ್ಮರಣ ಹೊಂದಿದ ನಮಾಂಶ್ ಪಾರ್ಥಿವ ಶರೀರವನ್ನು ಭಾನುವಾರ ಹುಟ್ಟೂರಿಗೆ ತರಲಾಯಿತು. ಈ ವೇಳೆ ದಾರಿಯುದ್ದಕ್ಕೂ ನೂರಾರು ಜನರು ಸಾಲುಗಟ್ಟಿ ನಿಂತು ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಅಂತಿಮ ದರ್ಶನ ಪಡೆದರು. ಈ ವೇಳೆ ಐಎಎಫ್‌ ಅಧಿಕಾರಿ ನಮಾಂಶ್‌ ಮಡದಿ ಸೇನಾ ಸಮವಸ್ತ್ರದಲ್ಲೇ ಭಾಗಿಯಾಗಿ 6 ವರ್ಷದ ಮಗಳ ಜತೆಗೆ ಪತಿಗೆ ಭಾವುಕ ವಿದಾಯ ಹೇಳಿದರು.