ಟೆಕ್‌ ಲೋಕದಲ್ಲಿ ಸದಾ ಒಂದಿಲ್ಲೊಂದು ಅವಿಷ್ಕಾರಗಳಿಂದ ಸುದ್ದಿಯಾಗುವ ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್‌ , ವಿಶ್ವದ ಅತಿದೊಡ್ಡ ವಿಶ್ವಕೋಶ ವಿಕಿಪೀಡಿಯಾಗೆ ಠಕ್ಕರ್‌ ನೀಡಲು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ಗ್ರೋಕಿಪೀಡಿಯಾ ಎನ್ನುವ ಆನ್‌ಲೈನ್ ವೇದಿಕೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ನವದೆಹಲಿ: ಟೆಕ್‌ ಲೋಕದಲ್ಲಿ ಸದಾ ಒಂದಿಲ್ಲೊಂದು ಅವಿಷ್ಕಾರಗಳಿಂದ ಸುದ್ದಿಯಾಗುವ ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್‌ , ವಿಶ್ವದ ಅತಿದೊಡ್ಡ ವಿಶ್ವಕೋಶ ವಿಕಿಪೀಡಿಯಾಗೆ ಠಕ್ಕರ್‌ ನೀಡಲು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ಗ್ರೋಕಿಪೀಡಿಯಾ ಎನ್ನುವ ಆನ್‌ಲೈನ್ ವೇದಿಕೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ವಿಕಿಪೀಡಿಯಾಗೆ ಪರ್ಯಾಯ

ಇದು ವಿಕಿಪೀಡಿಯಾಗೆ ಪರ್ಯಾಯ ಎಂದೇ ಬಿಂಬಿತವಾಗುತ್ತಿದೆ. ಅಲ್ಲದೇ ಮಸ್ಕ್‌ ಕೂಡ ‘ ಗ್ರೋಕಿಪೀಡಿಯಾ ಎಐಗೆ ಪರ್ಯಾಯ’ ಎಂದು ಹೇಳಿಕೊಂಡಿದ್ದಾರೆ. ವಿಕಿಪೀಡಿಯಾದಂತೆ ಇಲ್ಲಿ ವಿಷಯಗಳನ್ನು ಸಂಪಾದಿಸಲು ಮಾನವ ಸಂಪನ್ಮೂಲಗಳ ಅವಶ್ಯಕತೆಯಿಲ್ಲ.

ಎಲ್ಲವೂ ಎಐ ನೆರವಿನಿಂದ

 ಎಲ್ಲವೂ ಎಐ ನೆರವಿನಿಂದ ಆಗಿ ಬಿಡುತ್ತದೆ. ಆರಂಭದಲ್ಲಿ ಗ್ರೋಕ್‌ ಚಾಟ್‌ಬಾಟ್‌ ಮೂಲಕ ವಿಷಯಗಳನ್ನು ರಚಿಸಲಾಗುತ್ತದೆ. ಬಳಿಕ ಅದನ್ನು ಎಕ್ಸ್ಎಐ ಪರಿಶೀಲಿಸಿ ಗ್ರೋಕಿಪೀಡಿಯಾದ ಮೂಲಕ ಜನರಿಗೆ ತಲುಪುವಂತೆ ಮಾಡುತ್ತದೆ.