ಟೆಸ್ಲಾ ಭಾರತ ಪ್ರವೇಶಕ್ಕೂ ಮುನ್ನ ಎಲಾನ್‌ ಮಸ್ಕ್‌ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತು

| N/A | Published : Apr 19 2025, 12:45 AM IST / Updated: Apr 19 2025, 06:10 AM IST

ಸಾರಾಂಶ

ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲಿವೆ ಎಂಬ ಸುದ್ದಿಯೇ ಮಧ್ಯೆಯೇ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಸ್ಕ್‌ ದೂರುವಾಣಿ ಮಾತುಕತೆಗೆ ನಡೆಸಿದ್ದಾರೆ.

ನವದೆಹಲಿ: ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲಿವೆ ಎಂಬ ಸುದ್ದಿಯೇ ಮಧ್ಯೆಯೇ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಸ್ಕ್‌ ದೂರುವಾಣಿ ಮಾತುಕತೆಗೆ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲಾನ್‌ ಮಸ್ಕ್‌ ಅವರ ಜೊತೆಗೆ ಹಲವು ವಿಷಯಗಳ ಕುರಿತು ದೂರವಾಣಿ ಮಾತುಕತೆ ನಡೆಸಲಾಯಿತು. ಇದರಲ್ಲಿ ನಾವು ಫೆಬ್ರವರಿಯಲ್ಲಿ ನಡೆಸಿದ್ದ ವಿಷಯಗಳ ಕುರಿತು ಚರ್ಚಿಸಲಾಯಿತು. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಇರುವ ಅಪಾರ ಸಾಮರ್ಥ್ಯದ ಬಗ್ಗೆ ನಾವು ಚರ್ಚಿಸಿದ್ದೇವೆ. ಈ ಕ್ಷೇತ್ರಗಳಲ್ಲಿ ಅಮೆರಿಕದೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಹಂಚಿಕೊಂಡಿದರು.

ಮಸ್ಕ್‌ ಅವರ ಟೆಸ್ಲಾ ಕಂಪನಿಯು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮುಂಬೈಗೆ ಸಾವಿರ ಕಾರುಗಳನ್ನು ತರಲಿದ್ದು, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಮಾರಾಟ ಮಾಡಲಿದೆ ಎಂದು ಬ್ಲೂಂಬರ್ಗ್‌ ವರದಿ ಮಾಡಿದೆ.