ಸಾರಾಂಶ
ನವದೆಹಲಿ: ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದು, , ಕೆಲವು ಸಂಸ್ಕರಿಸಿದ, ತಳೀಯವಾಗಿ ಮಾರ್ಪಡಿಸಿದ (ಕುಲಾಂತರಿ) ಅಮೆರಿಕದ ಕೃಷಿ ಉತ್ಪನ್ನಗಳ ಆಮದಿಗೆ ಅವಕಾಶ ನೀಡಬಹುದು ಎಂದು ಮೂಲಗಳು ಹೇಳಿವೆ.
ಭಾರತದಲ್ಲಿ ಕುಲಾಂತರಿ ಉತ್ಪನ್ನಗಳಿಗೆ ರೈತರ ವಿರೋಧ ಇದ್ದರೂ ಆಮೆರಿಕದಿಂದ ಕೆಲ ಬಿಟಿ ಉತ್ಪನ್ನಗಳ ಆಮದಿಗೆ ಭಾರತ ಅಸ್ತು ಎಂದಿದೆ. ಪಶು ಆಹಾರಗಳಲ್ಲಿ ಬಳಸಲಾಗುವ ಕೆಲವು ಉತ್ಪನ್ನಗಳಾದ ಸೋಯಾಬೀನ್ ಮೇವು ಮತ್ತು ಒಣ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಭಾರತ ಒಪ್ಪುವ ಸಾಧ್ಯತೆ ಇದೆ. 2-3 ದಿನದಲ್ಲಿ ವ್ಯಾಪಾರ ಒಪ್ಪಂದದ ಅಂತಿಮ ಘೋಷಣೆ ಹೊರಬೀಳಬಹುದು ಎಂದು ಮೂಲಗಳು ಹೇಳಿವೆ. ಎಂದು ಮೂಲಗಳು ಹೇಳಿವೆ.
ಆದರೆ ರೈತರ ವಿರೋಧದ ಕಾರಣ ಅಮೆರಿಕದ ಡೈರಿ ಉತ್ಪನ್ನಗಳಿಗೆ ಭಾರತ ಅವಕಾಶ ನೀಡಲಿಕ್ಕಿಲ್ಲ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಭಾರಿ ಪ್ರತಿತೆರಿಗೆ ಹೇರಿ ಬಳಿಕ ಜು.9ರವರೆಗೆ ತಮ್ಮ ನಿರ್ಧಾರ ಮುಂದೂಡಿದ್ದರು. ಈಗ ಜು.9ರ ಗಡುವಿನೊಳಗೆ ತೆರಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶ ಯತ್ನಿಸುತ್ತಿವೆ.