ಸಾರಾಂಶ
ದುಬೈ: ಪಾಕಿಸ್ತಾನದೊಂದಿಗೆ ಸಿಂಧೂ ನದಿ ಜಲ ಒಪ್ಪಂದವನ್ನು ತಡೆಹಿಡಿದ ಭಾರತ ಸರ್ಕಾರದ ಕ್ರಮ ಖಂಡಿಸಿ ಪಾಕಿಸ್ತಾನಿ ವ್ಯಕ್ತಿಯೊಬ್ಬ, ಭಾರತೀಯ ಮೂಲದ ಯುವಕನಿಗೆ ಕುಡಿಯಲು ನೀರು ಕೊಡಲು ನಿರಾಕರಿಸಿದ ಘಟನೆ ದುಬೈನಲ್ಲಿ ನಡೆದಿದೆ.
ಉತ್ತರಾಖಂಡದ ವಿಶಾಲ್ ಎಂಬ ಯುವಕ ದುಬೈನಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನ ಮೂಲದ ಯುವಕರೊಂದಿಗೆ ಮನೆಯಲ್ಲಿ ವಾಸವಿದ್ದ. ಕೆಲ ದಿನಗಳ ಹಿಂದೆ ವಿಶಾಲ್ ಮನೆಯಲ್ಲಿ ನೀರು ಕುಡಿಯಲು ಹೋದಾಗ ಪಾಕಿಸ್ತಾನ ಮೂಲದ ಯುವಕರು ಆತನಿಗೆ ನೀರು ಕುಡಿಯಲು ಅಡ್ಡಿ ಮಾಡಿದ್ದಾರೆ.
ಈ ಬಗ್ಗೆ ವಿಶಾಲ್ ಪ್ರಶ್ನಿಸಿದಾಗ ‘ಭಾರತ ಸಿಂಧೂ ಜಲ ಒಪ್ಪಂದವನ್ನು ತಡೆ ಹಿಡಿದಿದ್ದು, ಪಾಕಿಸ್ತಾನಕ್ಕೆ ನೀರನ್ನು ಹರಿಸುತ್ತಿಲ್ಲ. ಹಾಗಾಗಿ ನಾವೂ ನಿನಗೆ ಕುಡಿಯಲು ನೀರನ್ನು ಕೊಡಲಾರೆವು’ ಎಂದು ಪಾಕ್ ಯುವಕರು ಪೀಡಿಸಿದ್ದಾರೆ. ಇದರಿಂದ ತೀವ್ರ ನಿರ್ಜಲೀಕರಣದಿಂದ ಅಸ್ವಸ್ಥಗೊಂಡಿದ್ದ ಯುವಕ ಕಂಗೆಟ್ಟು, ಕುಟುಂಬ ಸದಸ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕುಟುಂಬ ಸದಸ್ಯರು ಕೊನೆಗೆ ಉತ್ತರಾಖಂಡ ಪೊಲೀಸರ ನೆರವು ಕೋರಿದ್ದಾರೆ. ಪೊಲೀಸರ ನೆರವಿನೊಂದಿಗೆ ಇದೀಗ ವಿಶಾಲ್ ತವರಿಗೆ ಮರಳಿದ್ಧಾನೆ.