ರೈಲಲ್ಲಿ ಕೆಟಲ್‌ನಲ್ಲಿ ಮಹಿಳೆ ಅಡುಗೆ!

| Published : Nov 23 2025, 02:00 AM IST

ಸಾರಾಂಶ

ಮಧ್ಯ ರೈಲ್ವೆ ವ್ಯಾಪ್ತಿಯ ರೈಲೊಂದರಲ್ಲಿ ಮಹಿಳೆಯೊಬ್ಬರು ಎಸಿ ಬೋಗಿಯ ಮೊಬೈಲ್ ಚಾರ್ಜಿಂಗ್ ಸಾಕೆಟ್‌ ಬಳಸಿ ಕೆಟಲ್‌ ಮೂಲಕ ಅಡುಗೆ ಮಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ರೈಲಿನ ಸುರಕ್ಷತೆ ಪ್ರಶ್ನೆ ಆಗಿರುವ ಕಾರಣ ಇಲಾಖೆಯು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಹಿಳೆಯ ಪತ್ತೆಗೆ ಹುಡುಕಾಟ ನಡೆಸಿದೆ.

- ಚಾರ್ಜಿಂಗ್ ಸಾಕೆಟ್‌ನಲ್ಲಿ ಕೆಟಲ್‌ ಸಿಗಿಸಿ ಮ್ಯಾಗಿ ರೆಡಿ

- 10-15 ಜನರಿಗೆ ಚಹಾ ಮಾಡಿದೆ ಎಂದು ಮಹಿಳೆ ರೀಲ್ಸ್

- ಆಕೆಯ ಪತ್ತೆಗೆ ಸೂಚಿಸಿದ ಮಧ್ಯ ರೈಲ್ವೆ ವಲಯ

ಮುಂಬೈ: ಮಧ್ಯ ರೈಲ್ವೆ ವ್ಯಾಪ್ತಿಯ ರೈಲೊಂದರಲ್ಲಿ ಮಹಿಳೆಯೊಬ್ಬರು ಎಸಿ ಬೋಗಿಯ ಮೊಬೈಲ್ ಚಾರ್ಜಿಂಗ್ ಸಾಕೆಟ್‌ ಬಳಸಿ ಕೆಟಲ್‌ ಮೂಲಕ ಅಡುಗೆ ಮಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ರೈಲಿನ ಸುರಕ್ಷತೆ ಪ್ರಶ್ನೆ ಆಗಿರುವ ಕಾರಣ ಇಲಾಖೆಯು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಹಿಳೆಯ ಪತ್ತೆಗೆ ಹುಡುಕಾಟ ನಡೆಸಿದೆ.

ಮಹಿಳೆ ಇತ್ತೀಚೆಗೆ ರೈಲಲ್ಲಿ ಸಂಚರಿಸುವಾಗ ಮೊಬೈಲ್‌ ಚಾರ್ಜಿಂಗ್‌ ಸಾಕೆಟ್‌ಗೆ ಕೆಟಲ್‌ ಪ್ಲಗ್‌ ಹಾಕಿದ್ದಾಳೆ. ಅದರಲ್ಲಿ ಮ್ಯಾಗಿ ಮಾಡಿದ್ದಲ್ಲದೆ ಚಹಾ ಕೂಡ ಮಾಡಿದ್ದಾಳೆ. ಇರದ ವಿಡಿಯೋ ಚಿತ್ರೀಕರಿಸಿ ರೀಲ್ಸ್‌ ಮಾಡಿ. ‘ಈಗಾಗಲೇ 10-15 ಜನರಿಗೆ ಚಹಾ ಮಾಡಿದೆ. ಈಗ ಮ್ಯಾಗಿ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇಲಾಖೆಯು ಪೂರಕವಾಗಿ ಸ್ಪಂದಿಸಿದೆ.

‘ಮಹಿಳೆಯ ಗುರುತು ಪತ್ತೆಮಾಡಿದ್ದು, ಆಕೆಯನ್ನು ಹುಡುಕುವ ಕೆಲಸ ನಡೆಯುತ್ತಿದೆ. ರೈಲಿನ ಚಾರ್ಜಿಂಗ್‌ ಸಾಕೆಟ್‌ ಕೇವಲ ಮೊಬೈಲ್‌ ಚಾರ್ಜಿಂಗ್‌ಗೆ ಮಾತ್ರವೇ ಸೀಮಿತ. ಬೇರೆ ಯಾವುದೇ ವಸ್ತುಗಳನ್ನು ಅದರಲ್ಲಿ ಬಳಸಬಾರದು. ಹೀಗೆ ಬಳಸಿದಲ್ಲಿ, ಅದು ರೈಲಿಗೆ ಬೆಂಕಿ ಹತ್ತಬಹುದು. ಜೊತೆಗೆ ಎಸಿ, ವಿದ್ಯುತ್‌ ವ್ಯವಸ್ಥೆ ಮೇಲೂ ಅಡ್ಡ ಪರಿಣಾಮ ಬೀರುತ್ತದೆ’ ಎಂದು ಎಚ್ಚರಿಸಿದೆ.