ಸಾರಾಂಶ
ರಸ್ತೆ ಮತ್ತು ಚರಂಡಿಯನ್ನು ಪುರಸಭೆ ವತಿಯಿಂದ ನಿರ್ಮಿಸಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು, ಆದರೆ ರೈಲ್ವೆ ಇಲಾಖೆ ವತಿಯಿಂದ ಇತ್ತೀಚೆಗೆ ಕಾಮಗಾರಿ ನಡೆಸುವ ಸಲುವಾಗಿ ಚರಂಡಿ ಹಾಗೂ ರಸ್ತೆಯನ್ನು ಅಗೆದಿರುವುರಿಂದ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುವಂತೆ ಆಗಿದೆ. ರೈಲ್ವೆ ಇಲಾಖೆ ಮಾಡಿರುವ ಕಾಮಗಾರಿಯಿಂದ ಚರಂಡಿಗೆ ಮಣ್ಣು ತುಂಬಿದೆ. ಜನತಾ ಕಾಲೋನಿಯ ನಿವಾಸಿಗಳ ಮನೆಯಿಂದ ಹೊರ ಹೋಗುವ ತ್ಯಾಜ್ಯದ ನೀರು ಚರಂಡಿ ಮೂಲಕ ಹೊರ ಹೋಗುತ್ತಿತ್ತು, ಈಗ ಚರಂಡಿ ಮುಚ್ಚಿರುವ ಕಾರಣದಿಂದ ಸಮಸ್ಯೆ ಉಲ್ಪಣಿಸಿದೆ ಜತೆಗೆ ದಿನನಿತ್ಯ ಬಳಕೆಯ ರಸ್ತೆಯನ್ನು ಸಹ ಕಾಮಗಾರಿ ಸಲುವಾಗಿ ಕಿತ್ತು ಹಾಕಿದ್ದು, ಓಡಾಡಲು ಅಗದಂತಹ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಅಂಬೇಡ್ಕರ್ ನಗರದ ಜನತಾ ಕಾಲೋನಿಯಲ್ಲಿನ ರಸ್ತೆ ಹಾಗೂ ಚರಂಡಿಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮುಚ್ಚಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಟಾಗಿದೆ ಎಂದು ಕಾಲೋನಿಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಜನತಾ ಕಾಲೋನಿಯಲ್ಲಿ ಹತ್ತಾರು ದಲಿತ ಬಡಕುಟುಂಬಗಳು ವಾಸವಾಗಿದ್ದು, ಆಲ್ಲಿನ ರಸ್ತೆ ಮತ್ತು ಚರಂಡಿಯನ್ನು ಪುರಸಭೆ ವತಿಯಿಂದ ನಿರ್ಮಿಸಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು, ಆದರೆ ರೈಲ್ವೆ ಇಲಾಖೆ ವತಿಯಿಂದ ಇತ್ತೀಚೆಗೆ ಕಾಮಗಾರಿ ನಡೆಸುವ ಸಲುವಾಗಿ ಚರಂಡಿ ಹಾಗೂ ರಸ್ತೆಯನ್ನು ಅಗೆದಿರುವುರಿಂದ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುವಂತೆ ಆಗಿದೆ. ರೈಲ್ವೆ ಇಲಾಖೆ ಮಾಡಿರುವ ಕಾಮಗಾರಿಯಿಂದ ಚರಂಡಿಗೆ ಮಣ್ಣು ತುಂಬಿದೆ. ಜನತಾ ಕಾಲೋನಿಯ ನಿವಾಸಿಗಳ ಮನೆಯಿಂದ ಹೊರ ಹೋಗುವ ತ್ಯಾಜ್ಯದ ನೀರು ಚರಂಡಿ ಮೂಲಕ ಹೊರ ಹೋಗುತ್ತಿತ್ತು, ಈಗ ಚರಂಡಿ ಮುಚ್ಚಿರುವ ಕಾರಣದಿಂದ ಸಮಸ್ಯೆ ಉಲ್ಪಣಿಸಿದೆ ಜತೆಗೆ ದಿನನಿತ್ಯ ಬಳಕೆಯ ರಸ್ತೆಯನ್ನು ಸಹ ಕಾಮಗಾರಿ ಸಲುವಾಗಿ ಕಿತ್ತು ಹಾಕಿದ್ದು, ಓಡಾಡಲು ಅಗದಂತಹ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಡಾವಣೆಯ ನಿವಾಸಿಗಳು ಅಸಹಾಯಕತೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ.ಪುರಸಭೆ ಅಧಿಕಾರಿಗಳು ರೈಲ್ವೆ ಇಲಾಖೆಯಿಂದ ಆಗಿರುವ ತೊಂದರೆಯನ್ನು ನಿವಾರಿಸಿ ರಸ್ತೆ ಚರಂಡಿಯನ್ನು ಮತ್ತೆ ಯಥಾಸ್ಥಿತಿಗೆ ತರುವ ಮೂಲಕ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
;Resize=(128,128))
;Resize=(128,128))
;Resize=(128,128))