ಸಾರಾಂಶ
ಲಿವ್ ಇನ್ ಸಂಬಂಧದಲ್ಲಿ, ಪುರುಷ ಮಹಿಳೆ ಮೇಲೆ ಕ್ರೌರ್ಯ ನಡೆಸಿದರೆ ಅದರ ವಿರುದ್ಧ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಕೊಚ್ಚಿ: ಲಿವ್ ಇನ್ ಸಂಬಂಧದಲ್ಲಿ, ಪುರುಷ ಮಹಿಳೆ ಮೇಲೆ ಕ್ರೌರ್ಯ ನಡೆಸಿದರೆ ಅದರ ವಿರುದ್ಧ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಲಿವ್ ಇನ್ ಸಂಬಂಧದಲ್ಲಿದ್ದ ಮಹಿಳೆ, ತನ್ನ ಸಹ ಸಂಗಾತಿ ವಿರುದ್ಧ ದಾಖಲಿಸಿದ್ದ ವಿಚಾರಣೆಯನ್ನು ನಡೆಸಿದ ಕೋರ್ಟ್ ಈ ರೀತಿ ತೀರ್ಪು ನೀಡಿದೆ.‘ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಭಾವಿಸುವುದು ಆಕೆ ತನ್ನ ಪತಿ, ಪತಿಯ ಸಂಬಂಧಿಕರಿಂದ ಹಲ್ಲೆಗೊಳಗಾದ ಪ್ರಕರಣಗಳಲ್ಲಿ ಮಾತ್ರ. ಗಂಡ ಎಂದರೆ ಮದುವೆಯಾದ ವ್ಯಕ್ತಿ ಎಂದರ್ಥ. ಮದುವೆ ಎಂದರೆ ಕಾನೂನು ರೀತಿಯಲ್ಲಿನ ವಿವಾಹ. ಕಾನೂನಿನ ರೀತಿಯಲ್ಲಿ ಮದುವೆಯಾಗದೇ , ಪುರುಷ ಮಹಿಳೆಯೊಬ್ಬಳ ಸಂಗಾತಿಯಾದರೆ, ಆತ ಗಂಡ ಎಂಬ ಪದದ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹೈಕೋರ್ಟ್ ಹೇಳಿದೆ.