ಬಿಎಸ್ಪಿ ಅಧ್ಯಕ್ಷೆ ಮಾಯಾ ಉತ್ತರಾಧಿಕಾರಿ ಆಕಾಶ್‌ಗೆ ಪಕ್ಷದಿಂದ ಪಕ್ಷದಿಂದಲೇ ಗೇಟ್‌ಪಾಸ್‌

| N/A | Published : Mar 03 2025, 01:47 AM IST / Updated: Mar 03 2025, 04:59 AM IST

ಸಾರಾಂಶ

ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರ ಉತ್ತರಾಧಿಕಾರಿಯೆಂದೇ ಬಿಂಬಿತರಾಗಿದ್ದ, ಅವರ ಸೋದರಳಿಯ ಆಕಾಶ್‌ ಆನಂದ್‌ ಅವರನ್ನು ಪಕ್ಷ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ ಮಾಯಾವತಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಪಕ್ಷದಲ್ಲಿನ ಬಿನ್ನಮತ ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದೆ.

ಲಖನೌ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರ ಉತ್ತರಾಧಿಕಾರಿಯೆಂದೇ ಬಿಂಬಿತರಾಗಿದ್ದ, ಅವರ ಸೋದರಳಿಯ ಆಕಾಶ್‌ ಆನಂದ್‌ ಅವರನ್ನು ಪಕ್ಷ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ ಮಾಯಾವತಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಪಕ್ಷದಲ್ಲಿನ ಬಿನ್ನಮತ ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದೆ.

ಅಶೋಕ್ ಸಿದ್ಧಾರ್ಥ್ ಪಕ್ಷವನ್ನು 2 ಬಣಗಳಾಗಿ ವಿಭಜಿಸಲು ಸಂಚು ರೂಪಿಸಿದರು, ಅದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಆಕಾಶ್ ಮೇಲೆ ಅವರ ಹೆಂಡತಿ, ಮಾವನ ಪ್ರಭಾವವಿದೆ. ಇದೇ ಕಾರಣಕ್ಕೆ ಪಕ್ಷಕ್ಕೆ ಆಗುವ ನಷ್ಟವನ್ನು ತಪ್ಪಿಸಲು ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕಲಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

ಅಕಾಶ್‌ ಬದಲಿಗೆ ರಾಜ್ಯಸಭಾ ಸಂಸದ ರಾಮ್‌ಜಿ ಗೌತಮ್ ಹಾಗೂ ತಮ್ಮ ಕಿರಿಯ ಸಹೋದರ ಆನಂದ್ ಕುಮಾರ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ. ಆಕಾಶ್ ಆನಂದ್ ಅವರನ್ನು ತಮ್ಮ ಜವಾಬ್ದಾರಿಗಳಿಂದ ವಜಾಗೊಳಿಸುತ್ತಿರುವುದು ಇದು 2ನೇ ಬಾರಿ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಮೊದಲ ಬಾರಿಗೆ ಅವರನ್ನು ವಜಾಗೊಳಿಸಲಾಗಿತ್ತು. ಬಳಿಕ ಜುಲೈನಲ್ಲಿ ಮರುನೇಮಕ ಮಾಡಿ ರಾಜಕೀಯ ನೇತೃತ್ವ ವಹಿಸಿದ್ದರು. ಇದೀಗ ಮತ್ತೆ ಸಂಬಂಧದಲ್ಲಿ ಬಿರುಕು ಮೂಡಿದ್ದು, ತಾವು ಬದುಕಿರುವವರೆಗೂ ಪಕ್ಷದಲ್ಲಿ ಯಾರೂ ತಮ್ಮ ಉತ್ತರಾಧಿಕಾರಿಯಾಗುವುದಿಲ್ಲ ಎಂದು ಮಾಯಾವತಿ ಘೋಷಿಸಿದ್ದಾರೆ.