ಸಾರಾಂಶ
ಅಷ್ಟಧಾತುವಿನಿಂದ ತಯಾರಿಸಿರುವ 2000 ಕೆಜಿ ತೂಕವುಳ್ಳ 25 ಲಕ್ಷ ರು. ಮೌಲ್ಯದ ಬೃಹತ್ ಗಂಟೆಯನ್ನು ಶ್ರೀರಾಮಮಂದಿರಕ್ಕೆ ಸಮರ್ಪಿಸಲಾಗಿದೆ.
ಅಯೋಧ್ಯೆ: ರಾಮಮಂದಿರಕ್ಕೆ ಉತ್ತರ ಪ್ರದೇಶದ ಎತಾಹ್ ಜಲೆಸಾರ್ ಪಟ್ಟಣದ ವ್ಯಕ್ತಿಯೊಬ್ಬರು ಬರೋಬ್ಬರಿ 25 ಲಕ್ಷ ರು. ಮೌಲ್ಯದ 2100 ಸಾವಿರ ಕೇಜಿ ತೂಕವುಳ್ಳ ಬೃಹತ್ ಗಂಟೆ ಸಮರ್ಪಿಸಿದ್ದಾರೆ.
ಈ ಬೃಹತ್ ಗಂಟೆಯನ್ನು ಆದಿತ್ಯ ಮಿತ್ತಲ್ ಎಂಬ ಧಾತು ವ್ಯಾಪಾರಿ ತನ್ನ ಅಸುನೀಗಿದ ಸಹೋದರನ ಕೊನೆಯಾಸೆ ಪೂರೈಸುವ ಸಲುವಾಗಿ ಚಿನ್ನ, ಬೆಳ್ಳಿಯೂ ಸೇರಿದಂತೆ ಅಷ್ಟಧಾತುಗಳಿಂದ ತಯಾರಿಸಿದ್ದು, ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಪೂರೈಸಿ ಅಯೋಧ್ಯೆಗೆ ರೈಲಿನ ಮೂಲಕ ಕಳುಹಿಸಿ ಕೊಡಲಾಗಿದೆ.
ಇದನ್ನು 30 ಕುಶಲಕರ್ಮಿಗಳು ಬರೋಬ್ಬರಿ 2 ವರ್ಷಗಳ ಕಾಲ ಕಠಿಣ ಪರಿಶ್ರಮ ಹಾಕಿ ತಯಾರಿಸಿದ್ದಾರೆ. ಇದು ಭಾರತದಲ್ಲೇ ಅತ್ಯಂತ ಬೃಹತ್ ಘಂಟೆಯಾಗಿದೆ ಎಂದು ಆದಿತ್ಯ ಮಿತ್ತಲ್ ತಿಳಿಸಿದ್ದಾರೆ.