ಸಾರಾಂಶ
ದೆಹಲಿಯತ್ತ ಹರಿಯುವ ಯಮುನಾ ನದಿಗೆ ಹರ್ಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸಿ ನರಮೇಧ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ 2ನೇ ನೋಟಿಸ್‌ಗೆ ಸ್ವತಃ ಆಯೋಗದ ಕಚೇರಿಗೆ ತೆರಳಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದ್ದಾರೆ.
ನವದೆಹಲಿ: ದೆಹಲಿಯತ್ತ ಹರಿಯುವ ಯಮುನಾ ನದಿಗೆ ಹರ್ಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸಿ ನರಮೇಧ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ 2ನೇ ನೋಟಿಸ್‌ಗೆ ಸ್ವತಃ ಆಯೋಗದ ಕಚೇರಿಗೆ ತೆರಳಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದ್ದಾರೆ.
ಅದರಲ್ಲಿ ‘ನಾನು ವಿಷ ಎಂದದ್ದು ನೀರಿನಲ್ಲಿರುವ ಅಮೋನಿಯಾಕ್ಕೆ. ಫೆ.5ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲು ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಯಮುನಾ ನದಿಗೆ ಅಮೋನಿಯಾ ಬೆರೆಸುವ ಮೂಲಕ ಸಾಮೂಹಿಕ ನರಮೇಧದ ಆರೋಪವನ್ನು ಆಪ್‌ನ ಮೇಲೆ ಹೊರಿಸುವ ಸಂಚು ರೂಪಿಸಿದ್ದರು’ ಎಂದು ಕೇಜ್ರಿವಾಲ್ ತಾವು ಸಲ್ಲಿಸಿದ 6 ಪುಟಗಳ ದೂರಿನಲ್ಲಿ ಆರೋಪಿಸಿದ್ದಾರೆ.
ಕೇಜ್ರಿವಾಲ್‌ಗೆ ಸಿಎಂ ಆತಿಶಿ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಸಾಥ್ ನೀಡಿದ್ದು, ಈ ವೇಳೆ ಅಮೋನಿಯಾ ಬೆರೆತ ನೀರಿನ 6 ಬಾಟಲಿಗಳನ್ನೂ ಕೊಂಡೊಯ್ದಿದ್ದರು.
ಈ ವೇಳೆ ಮಾತನಾಡಿದ ಆಪ್ ಸಂಸದ ಸಂಜಯ್ ಸಿಂಗ್, ‘ದೆಹಲಿಗೆ ವಿಷಕಾರಿ ನೀರು ಕಳಿಸಲು ಬಿಜೆಪಿಗರು ಮಾಡುತ್ತಿರುವ ಸಂಚಿನ ಬಗ್ಗೆ ಕೇಜ್ರಿವಾಲ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗವು ಈ ಸಂಬಂಧ ತನಿಖೆ ನಡೆಸುವ ಭರವಸೆ ನೀಡಿದೆ’ ಎಂದರು.