‘ಪತಿಯಾದವನು ಮನೆಯಲ್ಲಿ ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಮೊದಲಾದ ಕೆಲಸಗಳಲ್ಲಿ ಹೆಂಡತಿಯಷ್ಟೇ ಸಮಾನವಾಗಿ ತೊಡಗಿಕೊಳ್ಳಬೇಕು. ಆಕೆಂದರೆ ಆತ ಮನೆ ಕೆಲಸದಾಕೆಯನ್ನು ಮದುವೆಯಾಗಿಲ್ಲ, ಜೀವನ ಸಂಗಾತಿಯನ್ನು ಮದುವೆಯಾಗಿದ್ದಾನೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
-ಪತ್ನಿ ಮನೆಗೆಲಸದಾಕೆಯಲ್ಲ, ಜೀವನ ಸಂಗಾತಿ: ಕೋರ್ಟ್
- ಕರ್ನಾಟಕ ವ್ಯಕ್ತಿಯ ಡೈವೋರ್ಸ್ ಕೇಸಲ್ಲಿನ ಅಭಿಪ್ರಾಯನವದೆಹಲಿ: ‘ಪತಿಯಾದವನು ಮನೆಯಲ್ಲಿ ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಮೊದಲಾದ ಕೆಲಸಗಳಲ್ಲಿ ಹೆಂಡತಿಯಷ್ಟೇ ಸಮಾನವಾಗಿ ತೊಡಗಿಕೊಳ್ಳಬೇಕು. ಆಕೆಂದರೆ ಆತ ಮನೆ ಕೆಲಸದಾಕೆಯನ್ನು ಮದುವೆಯಾಗಿಲ್ಲ, ಜೀವನ ಸಂಗಾತಿಯನ್ನು ಮದುವೆಯಾಗಿದ್ದಾನೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ಸರಿಯಾಗಿ ಆಹಾರ ತಯಾರಿಸುತ್ತಿಲ್ಲ ಮತ್ತು ಪತಿಯ ಮೇಲೆ ಕ್ರೌರ್ಯ ತೋರುತ್ತಿದ್ದಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ವಿಚಾರಣಾ ಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ಪೀಠ, ‘ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು.. ಹೀಗೆ ಎಲ್ಲ ಕೆಲಸಗಳಲ್ಲೂ ಪತಿ ಸಮಾನವಾಗಿ ಪಾಲ್ಗೊಳ್ಳಬೇಕು. ಇಂದಿನ ಕಾಲ ಬೇರೆ. ಗಂಡನಾದವನು ಮನೆಗೆಲಸದವಳನ್ನು ಮದುವೆಯಾಗಿರುವುದಿಲ್ಲ, ಬದಲಾಗಿ ಜೀವನ ಸಂಗಾತಿಯನ್ನು ಮದುವೆಯಾಗಿರುತ್ತಾನೆ’ ಎಂದು ತಿಳಿಹೇಳಿತು.
ಜೊತೆಗೆ, ಇಬ್ಬರನ್ನೂ ಸಂಧಾನಕ್ಕಾಗಿ ಹಾಜರಾಗುವಂತೆ ಸೂಚಿಸಿ, ಏ.27ಕ್ಕೆ ವಿಚಾರಣೆಯನ್ನು ಮುಂದೂಡಿತು.