ಸಾರಾಂಶ
ರಣಬೀರ್ ಕಪೂರ್ ಮತ್ತು ಸಾಯಿಪಲ್ಲವಿ ಮುಖ್ಯಭೂಮಿಕೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಚಿತ್ರವನ್ನು ಬರೋಬ್ಬರಿ 835 ಕೋಟಿ ರು. ವೆಚ್ಚದಲ್ಲಿ ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನವದೆಹಲಿ: ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿರುವ ಹಿಂದಿಯ ಹೊಸ ಚಲನಚಿತ್ರ ‘ರಾಮಾಯಣ’ವನ್ನು ಭರ್ಜರಿ 835 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಈ ಮೂಲಕ ಇದು ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಬಜೆಟ್‌ನ ಸಿನೆಮಾ ಎಂಬ ದಾಖಲೆಗೆ ಪಾತ್ರವಾಗಲಿದೆ ಎಂದು ವರದಿಗಳು ಹೇಳಿವೆ.ಸಿನಿಮಾದ ಪೋಸ್ಟ್ ಪ್ರೋಡಕ್ಷನ್‌ಗೆ ಬರೋಬ್ಬರಿ 600 ದಿನಗಳು ಬೇಕಾಗಲಿದ್ದು, ಸಿನಿಮಾ 2027ರ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ.
ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಮತ್ತು ಸಾಯಿ ಪಲ್ಲವಿಯ ಫಸ್ಟ್ ಲುಕ್ ಕೂಡ ರಿವೀಲ್ ಆಗಿತ್ತು .ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ರಣಬೀರ್, ಸಾಯಿಪಲ್ಲವಿ, ಲಾರಾ ದತ್ತ, ಸನ್ನಿ ಡಿಯೋಲ್ ಸೇರಿದಂತೆ ಬಹು ತಾರಾಂಗಣವಿದೆ.