ನವಿಲು ಸಾಂಬಾರ್‌ ತಯಾರಿಸಿದ ರೆಸಿಪಿ ವಿಡಿಯೋ ಪೋಸ್ಟ್‌ : ತೆಲಂಗಾಣದ ಯೂಟ್ಯೂಬರ್‌ ಬಂಧನ

| Published : Aug 13 2024, 12:59 AM IST / Updated: Aug 13 2024, 05:52 AM IST

ಸಾರಾಂಶ

ತೆಲಂಗಾಣದ ಯೂಟ್ಯೂಬರ್‌ ಒಬ್ಬ ನವಿಲಿನ ಸಾಂಬಾರ್‌ ತಯಾರಿಸಿ ಅದರ ರೆಸಿಪಿ ಪ್ರದರ್ಶಿಸಿದ್ದಕ್ಕೆ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.

ಹೈದರಾಬಾದ್‌: ತೆಲಂಗಾಣದ ಯೂಟ್ಯೂಬರ್‌ ಒಬ್ಬ ನವಿಲಿನ ಸಾಂಬಾರ್‌ ತಯಾರಿಸಿ ಅದರ ರೆಸಿಪಿ ಪ್ರದರ್ಶಿಸಿದ್ದಕ್ಕೆ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.

ತಂಗಲ್ಲಪಲ್ಲಿ ನಿವಾಸಿ ಕೋಡಮ್‌ ಪ್ರಣಯ್‌ ಕುಮಾರ್‌ ಎಂಬಾತ ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆಗಾಗಿ ನವಿಲಿನ ಸಾಂಬಾರ್‌ ತಯಾರಿಯ ವಿಡಿಯೋ ಪೋಸ್ಟ್‌ ಮಾಡಿದ್ದ. ವಿಷಯ ತಿಳಿಯುತ್ತಿದ್ದಂತೆ ಅವನನ್ನು ಪೊಲೀಸರು ಬಂಧಿಸಿ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.

ಈ ವೇಳೆ ಆತನ ಮನೆಯಲ್ಲಿ ಪತ್ತೆಯಾದ ಚಿಕನ್‌ ಕರಿಯನ್ನು ಕೂಡ ಪರಿಶೀಲನೆಗಾಗಿ ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿ ದನಿ ಎತ್ತಿದ ಕಾರಣ ಆ ವಿಡಿಯೋವನ್ನು ತೆಗೆದುಹಾಕಲಾಗಿದೆ.

ಕಾನೂನಿನ ಪ್ರಕಾರ ರಾಷ್ಟ್ರಪಕ್ಷಿಯಾದ ನವಿಲನ್ನು ಸಾಕುವುದು ಹಾಗೂ ಹಿಡಿಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಮೊದಲು ಕೂಡ ಕುಮಾರ್‌ ಕಾಡು ಹಂದಿಯ ಪದಾರ್ಥ ತಯಾರಿಸಿದ್ದ.