ಸಾರಾಂಶ
ರಾಹುಲ್ ಗಾಂಧಿಯ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುವುದನ್ನು ತಡಯುವ ಸಲುವಾಗಿ ತನಗೆ 10 ಕೆಜಿ ಬೊಜ್ಜು ಕರಗಿಸುವಂತೆ ಸೂಚಿಸಲಾಗಿತ್ತು ಎಂದು ಜೀಶಾನ್ ಸಿದ್ದಿಕಿ ಆರೋಪಿಸಿದ್ದಾರೆ.
ಮುಂಬೈ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಜೊತೆ ಹೆಜ್ಜೆ ಹಾಕಲು ಅವಕಾಶ ನೀಡುವ ಸಲುವಾಗಿ 10 ಕೆಜಿ ತಮ್ಮ ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಅವರ ಹಿಂಬಾಲಕರು ಸೂಚಿಸಿದ್ದರು ಎಂಬುದಾಗಿ ಉಚ್ಚಾಟಿತ ಮಹಾರಾಷ್ಟ್ರ ಯುವ ಕಾಂಗ್ರೆಸ್ ಅಧ್ಯಕ್ಷ ಜೀಶನ್ ಸಿದ್ದಿಕಿ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ವರ್ಗದ ನಾಯಕರನ್ನು ಅಸ್ಪೃಶ್ಯರಂತೆ ಕೋಮುವಾದಿಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ.
ನನಗೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ನಾಂದೇಡ್‌ನಲ್ಲಿ ಹೆಜ್ಜೆ ಹಾಕುವುದನ್ನು ತಪ್ಪಿಸುವ ಸಲುವಾಗಿ ನನಗೆ 10 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಿದ್ದರು.
ರಾಹುಲ್ ಗಾಂಧಿಯ ವಂದಿಮಾಗಧರು ಕಾಂಗ್ರೆಸ್ ಪಕ್ಷವನ್ನು ಮುಳುಗಿಸಲು ಸುಪಾರಿ ತೆಗೆದುಕೊಂಡಂತೆ ಕಾಣುತ್ತಿದೆ’ ಎಂದು ಕೆಂಡಕಾರಿದರು.
ಜೀಶನ್ ತಂದೆ ಬಾಬಾ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಯುವ ಕಾಂಗ್ರೆಸ್ ಅಧ್ಯಕ್ಷ ಪದವಿಯಿಂದ ಅವರನ್ನು ವಜಾ ಮಾಡಲಾಗಿತ್ತು.