ಕೊಡಗು ಅಖಿಲ ಅಮ್ಮ ಕೊಡವ ಸಮಾಜ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾದ 20 ಲಕ್ಷ ರು. ಮೊತ್ತದ ಚೆಕ್‌ನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಶುಕ್ರವಾರ ವಿಧಾನಸೌಧದಲ್ಲಿ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅವರಿಗೆ ಹಸ್ತಾಂತರಿಸಿದರು.
ನಾಪೋಕ್ಲು: ಕೊಡಗು ಅಖಿಲ ಅಮ್ಮ ಕೊಡವ ಸಮಾಜ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾದ 20 ಲಕ್ಷ ರು. ಮೊತ್ತದ ಚೆಕ್‌ನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಶುಕ್ರವಾರ ವಿಧಾನಸೌಧದಲ್ಲಿ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಅಮ್ಮ ಕೊಡವ ಸಮಾಜದ ಪ್ರಮುಖರಾದ ಪುತ್ತಾಮನೆ ಅನಿಲ್ ಪ್ರಸಾದ್, ನೇರಿಯಂಡಮ್ಮನ ಸುಬ್ರಮಣಿ, ಜನಾರ್ದನ, ಬಾನಂಡ ಸುನೀತ್, ಸೂದನ್, ಹೆಮ್ಮಚ್ಚಿಮನೆ ಎನ್. ಹರೀಶ್, ಎಚ್.ಎಂ. ಹರೀಶ್, ಮನ್ನಕಮನೆ ಎ. ಬಾಲಕೃಷ್ಣ, ಎಂ.ಎಂ. ಬಾಲಕೃಷ್ಣ, ಎಚ್.ಆರ್. ಮದನ್, ಪುತ್ತಾಮನೆ ಪರ್ವತ್, ಯತೀಶ್, ಎಚ್.ಎಂ. ಪ್ರಶಾಂತ್, ಕೊಡಿಂಜಮ್ಮನ ಬಾಲಕೃಷ್ಣ, ಶರಣು, ವಿಜು ಮತ್ತಿತರರು ಉಪಸ್ಥಿತರಿದ್ದರು.