ಶಿಕ್ಷಣಕ್ಕೆ ಜಿಡಿಪಿಯ ಶೇ.೬ರಷ್ಟು ಅನುದಾನ ಮೀಸಲಿಡಬೇಕು

| Published : Sep 03 2024, 01:42 AM IST

ಶಿಕ್ಷಣಕ್ಕೆ ಜಿಡಿಪಿಯ ಶೇ.೬ರಷ್ಟು ಅನುದಾನ ಮೀಸಲಿಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ವೃದ್ಧಿ ಸಾಧಿಸಬಹುದು. ಆರ್ಥಿಕತೆಯಲ್ಲಿ ಭಾರತ ಈಗ ವಿಶ್ವದಲ್ಲಿ ೫ನೇ ಸ್ಥಾನ. ಇನ್ನು ಕೆಲ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಬೆವರು ಹರಿಸದೆ ಶ್ರಮ ಹಾಕದೆ ಯಾವುದೇ ಸಾಧನೆ ಮಾಡಲು ಅಸಾಧ್ಯ

ಕನ್ನಡಪ್ರಭ ವಾರ್ತೆ ಕೋಲಾರಶಿಕ್ಷಣ ಕ್ಷೇತ್ರಕ್ಕೆ ದೇಶದ ಜಿಡಿಪಿಯ ಶೇ.೬ರಷ್ಟು ಅನುದಾನ ಮೀಸಲಿರಿಸಬೇಕಿತ್ತು. ದುರದೃಷ್ಟಕರವೆಂದರೆ ಶೇ.೩ರಷ್ಟನ್ನೂ ಕೊಡುತ್ತಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ವಿನಿಯೋಗಿಸುತ್ತಿರುವ ಅನುದಾನವನ್ನು ಖರ್ಚು ಎಂದು ಭಾವಿಸಬಾರದು. ಅದನ್ನು ದೇಶದ ಭವಿಷ್ಯ ದೃಷ್ಟಿಯಿಂದ ಹೂಡಿಕೆ ಎಂಬುದಾಗಿ ಪರಿಗಣಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಈರೇಶಿ.ಕೆ ಸಲಹೆ ನೀಡಿದರು.ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಸೋಮವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾತನಾಡಿದರು. ಆರ್ತಿಕತೆಯಲ್ಲಿ 5ನೇ ಸ್ಥಾನ

ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇನ್ನುಳಿದ ಸಾಧನಗಳು ಈಗಾಗಲೇ ಸಂಪೂರ್ಣ ವಿಫಲವಾಗಿವೆ. ಶಿಕ್ಷಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ವೃದ್ಧಿ ಸಾಧಿಸಬಹುದು. ಆರ್ಥಿಕತೆಯಲ್ಲಿ ಭಾರತ ಈಗ ವಿಶ್ವದಲ್ಲಿ ೫ನೇ ಸ್ಥಾನ. ಇನ್ನು ಕೆಲ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಬೆವರು ಹರಿಸದೆ ಶ್ರಮ ಹಾಕದೆ ಯಾವುದೇ ಸಾಧನೆ ಮಾಡಲು ಅಸಾಧ್ಯ. ಸಕಾರಾತ್ಮಕ ಮನೋಭಾವ, ಶಿಸ್ತು ಹಾಗೂ ತ್ಯಾಗ ಮಾನೋಭಾವ ಅಗತ್ಯವಿದೆ ಎಂದು ಸಲಹೆ ನೀಡಿದರು.ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರಗಳ ವಿತರಣೆಗೆ ಮಾತ್ರ ಸೀಮಿತವಾಗದೆ ಭವಿಷ್ಯ ರೂಪಿಸಿಕೊಡುವಲ್ಲಿಯೂ ಗಮನ ಹರಿಸಿದೆ, ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ಬಗೆ ಹರಿಸಲು ಶಿಕ್ಷಣವೊಂದೇ ಮಾರ್ಗದರ್ಶನವಾಗಿದೆ ಹಾಗಾಗಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗುವಂತ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ವಿದ್ಯಾವಂತ ಯುವಕರು ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಕರೆನೀಡಿದರು.ಹೆಣ್ಣು ಮಕ್ಕಳಿಗೆ ಮುಕ್ತ ಅ‍ವಕಾಶ

ಇಂದಿನ ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಬಾರದು ಎಂಬ ಕಟ್ಟುಪಾಡು ಭಾವನೆಗಳನ್ನು ಕಿತ್ತೊಗೆದು ಅವರಲ್ಲಿನ ಪ್ರತಿಭೆಗಳನ್ನು ಹೊರಹೊಮ್ಮಲು ಮುಕ್ತವಾದ ಅವಕಾಶ ಕಲ್ಪಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ತಿಳಿಸಿದರು.ಇಂದು ನರಸಾಪುರ ಬಳಿಯ ವಿಸ್ಟ್ರಾನ್ ಕಂಪನಿಯನ್ನು ಟಾಟಾ ಕಂಪನಿಯು ಪಡೆದಿದ್ದು ೧೫ ಸಾವಿರ ಹೆಣ್ಣು ಮಕ್ಕಳಿಗೆ ಉದ್ಯೋಗದ ಅವಕಾಶ ಕಲ್ಪಿಸಲಿದೆ ಹೆಣ್ಣು ಮಕ್ಕಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಸ್ವಾವಲಂಭಿಗಳಾಗಿ ಮಾಡಬೇಕು ಎಂದರು. ವಿವಿ ವ್ಯಾಪ್ತಿಯಲ್ಲಿ 280 ಕಾಲೇಜು

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಬಹುದಿನದ ಬೇಡಿಕೆಯ ಕನಸಾಗಿದ್ದು ಇಂದು ಬೃಹಧಾಕಾರವಾಗಿ ಬೆಳೆದಿದ್ದು ೨೮೦ ಕಾಲೇಜುಗಳನ್ನು ಒಳಗೊಂಡಿದೆ, ಬೆಂಗಳೂರು ವಿಶ್ವವಿದ್ಯಾಲಯವು ೮೦೦ ಕಾಲೇಜುಗಳನ್ನು ಒಳಗೊಂಡಿತ್ತು. ಇದನ್ನು ವಿಭಜಿಸಿ ಎರಡು ವಿಶ್ವವಿದ್ಯಾಲಯ ಮಾಡಲು ಚಿಂತನೇ ಇತ್ತು, ಆದರೆ ತುಮಕೊರು ಜಿಲ್ಲೆಯು ಪ್ರತ್ಯೇಕವಾಗ ಬೇಕೆಂಬ ಒತ್ತಡ ಬಂದಾಗ ಮೂರು ಭಾಗವಾಗಿದೆ ಎಂದು ತಿಳಿಸಿದರು.ನಮ್ಮ ವಿಶ್ವವಿದ್ಯಾಲಯದಲ್ಲಿ ೧.೩೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ೨೯ ಸಾವಿರ ಪದವಿ ವಿದ್ಯಾರ್ಥಿಗಳು, ೧೩ ಸಾವಿರ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ಅಮರಾವತಿಯಲ್ಲಿ ವಿ.ವಿ. ಕ್ಯಾಂಪಸ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ವೇಗವಾಗಿ ಪ್ರಗತಿಯಲ್ಲಿದೆ ಎಂಬುವುದನ್ನು ವಾಟ್ಸ್‌ಆಪ್‌ಗಳಲ್ಲಿ ಚಿತ್ರಗಳ ವಿವರಗಳನ್ನು ಗಮನಿಸಬಹುದಾಗಿದ್ದು, ೨ನೇ ಹಂತದ ಕಾಮಗಾರಿಗಳು ಪ್ರಾರಂಭವಾಗಿದೆ, ೮೦ ಕೋಟಿಗಳಿಗೂ ಅಧಿಕ ಅನುದಾನದಲ್ಲಿ ಕಾಮಗಾರಿಗಳು ಮುಂದುವರೆದಿದೆ ಎಂದರು. ಗೌರವ ಡಾಕ್ಟರೇಟ್ ಪ್ರದಾನ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೪ನೇ ಘಟಿಕೋತ್ಸವ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಬಿ.ವಿ ವೆಂಕಟಗಿರಿಯಪ್ಪ, ವೈದ್ಯಕೀಯ ಹಾಗೂ ಸಮಾಜ ಸೇವೆಗಾಗಿ ವೈದೇಹಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಿ.ಎ. ಕಲ್ಪಜಾ ಹಾಗೂ ವಾಸ್ತು ಶಿಲ್ಪ ಶಿಕ್ಷಣ ಕೊಡುಗೆಗಾಗಿ ಪ್ರೊ.ಕೆ.ಎಸ್ ಅನಂತಕೃ?ರಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಮೌಲ್ಯಮಾಪನ ಕುಲಸಚಿವ ಡಾ.ಕೆ. ತಿಪ್ಪೇಸ್ವಾಮಿ, ಆಡಳಿತ ಕುಲಸಚಿ ಪ್ರೊ.ಡಿ.ಕುಮುದ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ವೆಂಕಟೇಶಪ್ಪ ಇದ್ದರು.