ರಾಜಭಾಷಾ ಸಮಿತಿ ರದ್ದುಪಡಿಸಿ: ಕರವೇ

| Published : Sep 28 2025, 02:00 AM IST

ಸಾರಾಂಶ

ಸ್ವಾತಂತ್ರ್ಯಾ ನಂತರ ಇದೇ ರಾಜಭಾಷಾ ಆಯೋಗ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರ ನಡೆಸುತ್ತಾ ಬಂದಿದೆ, ಮೊಟ್ಟ ಮೊದಲ ಬಾರಿಗೆ ರಾಜಭಾಷ ಸಮಿತಿಗೆ ನೇರವಾಗಿ ಬಿಸಿ ಮುಟ್ಟಿಸುವ ಕಾರ್ಯವನ್ನು ಕರವೇ ಮಾಡಿದೆ. ದೇಶದಲ್ಲಿ ಈಗ ಇರುವುದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವ ಅಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಕೇಂದ್ರ ಸರ್ಕಾರದ ಸಂಸದೀಯ ರಾಜ್ಯ ಭಾಷಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮ ವಿರೋಧಿಸಿ ಹಿಂದಿ ಭಾಷೆಯಲ್ಲಿ ಆಳವಡಿಸಿರುವ ಬ್ಯಾನರ್‌ಗಳನ್ನು ನಾಶಪಡಿಸಿದ ಆರೋಪಿದ ಮೇಲೆ ಜೈಲಿಗೆ ಹಾಕಿರುವ 41 ಮಂದಿ ಕರವೇ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಕರವೇ ಪ್ರತಿಭಟನೆ ನಡೆಸಿತು.

ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಬೆಂಗಳೂರಿನ ತಾಜ್ ವೆಸ್ಟೆಂಡ್‌ ಪಂಚತಾರಾ ಹೋಟೆಲ್‌ನಲ್ಲಿ ಸಂಸದೀಯ ರಾಜಭಾಷ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಕುತಂತ್ರಗಳ ಸಮಾಲೋಚನ ಕಾರ್ಯಾಗಾರಕ್ಕೆ ಕರವೇ ಮುಖಂಡರು, ಕಾರ್ಯಕರ್ತರು ತೆರಳಿ ಪ್ರತಿಭಟನೆ ನಡೆಸುವ ಮೂಲಕ ಹಿಂದಿ ಸಾಮ್ರಾಜ್ಯ ಶಾಹಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ರಾಜಭಾಷೆ ಎಂಬುದೇ ಇಲ್ಲ

ಸ್ವಾತಂತ್ರ್ಯಾ ನಂತರ ಇದೇ ರಾಜಭಾಷಾ ಆಯೋಗ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರ ನಡೆಸುತ್ತಾ ಬಂದಿದೆ, ಮೊಟ್ಟ ಮೊದಲ ಬಾರಿಗೆ ರಾಜಭಾಷ ಸಮಿತಿಗೆ ನೇರವಾಗಿ ಬಿಸಿ ಮುಟ್ಟಿಸುವ ಕಾರ್ಯವನ್ನು ಕರವೇ ಮಾಡಿದೆ. ದೇಶದಲ್ಲಿ ಈಗ ಇರುವುದು ಪ್ರಜಾಪ್ರಭುತ್ವ ಆಳ್ವಿಕೆಯ ಕಾಲದಲ್ಲಿ ನಾವಿದ್ದೇವೆ. ರಾಜಪ್ರಭುತ್ವ ಹೋಗಿ ಹಲವಾರು ದಶಕಗಳು ಕಳೆದಿದೆ. ರಾಜರೇ ಇಲ್ಲದ ಕಾಲದಲ್ಲಿ ರಾಜಭಾಷೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ದೇಶದಲ್ಲಿ ಈಗ ಯಾವುದೇ ರಾಜ ಭಾಷೆಗಳು ಇಲ್ಲ. ಇರುವುದೆಲ್ಲಾವೂ ಆಯಾಯ ನೆಲದ ಭಾಷೆಗಳು ಜನರ ಭಾಷೆಗಳು ಹೊರತಾಗಿ ರಾಜಭಾಷೆ ಎಂಬುವುದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಕೇಂದ್ರ ಸರ್ಕಾರ ರಾಜಭಾಷಾ ಸಮಿತಿ/ ಆಯೋಗವನ್ನು ಕೂಡಲೇ ರದ್ದುಪಡಿಸಬೇಕು. ರಾಜ್ಯ ಭಾಷೆಯ ಹೆಸರಲ್ಲಿ ಹಿಂದಿ ಹೇರುವುದನ್ನು ನಾವು ಸಹಿಸಲು ಸಾಧ್ಯವಿಲ್ಲ. ಹಿಂದಿ ಹೇರಿಕೆ ದೇಶಕ್ಕೆ ಮಾರಕ ಮಾತ್ರವಲ್ಲ ಭಾರತದ ಐಕ್ಯತೆಗೆ ಧಕ್ಕೆ ತರಲಿದೆ ಎಂದು ಎಚ್ಚರಿಸಿದರು.

ಎಲ್ಲ ಭಾಷೆಗಳೂ ಸಮಾನ

ಒಕ್ಕೂಟ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದಿ ನುಡಿಗೆ ನೀಡಿರುವ ಹೆಚ್ಚುಗಾರಿಕೆ ಕೂಡಲೇ ನಿಲ್ಲಿಸಬೇಕು. ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಇರುವ ಎಲ್ಲ ಭಾಷೆಗಳನ್ನು ಒಕ್ಕೂಟ ಸರ್ಕಾರದ ಅಧಿಕೃತ ಆಡಳಿತ/ಸಂವಹನ ಭಾಷೆಯನ್ನಾಗಿ ಮಾಡಬೇಕು. ದೇಶದ ಎಲ್ಲಾ ನುಡಿಗಳೂ ಸಮಾನ ಎಂದು ಘೋಷಿಸ ಬೇಕೆಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ನಮ್ಮ ಮುಖಂಡರು /ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರೆಸಿ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ನಾವು ಪೊಲೀಸರ ಕೇಸು, ಜೈಲಿಗೆ ಹೆದರುವುದಿಲ್ಲ. ಹೆದರಿಸಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇನ್ನು ಮುಂದೆ ರಾಜ್ಯದ ಯಾವೂದೇ ಭಾಗದಲ್ಲಿ ಹಿಂದಿ ಪ್ರಚಾರಕ್ಕೆ ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಲು ಮುಂದಾದರೆ ಅದರ ಪರಿಣಾಮವನ್ನು ಅವರೇ ಎದುರಿಸಬೇಕಾಗುವುದು. ನಮ್ಮ ಸಹನೆ ಮಿತಿ ಮೀರಿದರೆ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸುಳ್ಳು ಕೇಸ್‌ ಹಿಂಪಡೆಯಲಿ

ಕ.ರ.ವೇ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಸುಳ್ಳು ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯ ಬೇಕು ಬಂಧಿತರನ್ನು ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಇಡೀ ರಾಜ್ಯಾದಾದ್ಯಂತ ಚಳವಳಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕ.ರ.ವೇ ಉಪಾಧ್ಯಕ್ಷ ಮುನಿರಾಜು, ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ವಡಗೂರು ಮಂಜುನಾಥ್, ಮಾಲೂರು ಅಧ್ಯಕ್ಷ ಎಂ. ಶ್ರೀನಿವಾಸ್ ಶಿವಕುಮಾರ್ ರಾಮಪ್ರಸಾಧ್, ಮಹೇಶ್, ಮಂಜುನಾಥ್, ಹುಸೇನ್, ಕೋದಂಡರಾಮ್, ಗಣೇಶ್ ಲೋಕೇಶ್, ಕೆ.ನವೀನ್. ಸಂತೋಷ್ ರಾಮಕೃಷ್ಣಪ್ಪ, ನವೀನ್ ರಂಜಿತ್ ಇದ್ದರು.